33.4 C
ಪುತ್ತೂರು, ಬೆಳ್ತಂಗಡಿ
March 31, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೈಕ್ ಗೆ ಅಡ್ಡ ಬಂದ ನಾಯಿ:ಪತ್ರಿಕೆ ವಿತರಕನಿಗೆ ಗಾಯ

ಕಡಿರುದ್ಯಾವರ: ಬೀದಿ ನಾಯಿಗಳು ಬೈಕಿಗೆ ಅಡ್ಡ ಬಂದ ಪರಿಣಾಮ ಪತ್ರಿಕೆ ವಿತರಕ ಬೈಕ್ ನಿಂದ ಬಿದ್ದು ಗಾಯಗೊಂಡ ಘಟನೆ ಕಡಿರುದ್ಯಾವರ ಗ್ರಾಮದ ಕಾನರ್ಪ ಶಾಲೆಯ ಬಳಿ ನಡೆದಿದೆ.

ಮುಂಡಾಜೆಯ ಪತ್ರಿಕೆ ವಿತರಕ ಬಾಲಚಂದ್ರ ನಾಯಕ್(48) ಭಾನುವಾರ ಬೆಳಿಗ್ಗೆ 5:30ರ ಸುಮಾರಿಗೆ ಪತ್ರಿಕೆಗಳನ್ನು ಸೋಮಂತಡ್ಕದಿಂದ ದಿಡುಪೆ ಕಡೆ ಕೊಂಡೊಯ್ಯುತ್ತಿದ್ದ ವೇಳೆ ಕಾನರ್ಪ ಶಾಲೆಯ ಬಳಿ ಇವರು ಚಲಾಯಿಸುತ್ತಿದ್ದ ಬೈಕ್ ಗೆ ನಾಯಿ ಅಡ್ಡ ಬಂದು ರಸ್ತೆಗೆ ಉರುಳಿ ಬಿದ್ದು ಎರಡು ಕೈಗಳ ಮೂಳೆ ಮುರಿತಕ್ಕೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ಸಂಪೂರ್ಣ ಗುಣಮುಖರಾಗಲು ಸುಮಾರು ಎರಡು ತಿಂಗಳ ಅವಧಿ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.

Related posts

ಅರಸಿನಮಕ್ಕಿ: ಅಂಗಡಿ ಗುಡ್ಡೆ ನಿವಾಸಿ ಶ್ರೀಮತಿ ಬಾಲಕಿ ನಿಧನ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು ಸಂಸ್ಕೃತ ಸಂಘದ ಅಧ್ಯಕ್ಷನಾಗಿ ಆದಿತ್ಯ ರಮೇಶ್ ಹೆಗಡೆ ಆಯ್ಕೆ

Suddi Udaya

ಪುಂಜಾಲಕಟ್ಟೆ ಕೆ.ಪಿ.ಎಸ್ ಸರಕಾರಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಸನ್: ಅತ್ಯುತ್ತಮ ವಲಯ ಪ್ರಶಸ್ತಿಯಲ್ಲಿ ಬೆಳ್ತಂಗಡಿ ವಲಯ ತೃತೀಯ ಸ್ಥಾನ

Suddi Udaya

ಅಕ್ರಮವಾಗಿ ಸಾಗಾಟಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಗೇರುಕಟ್ಟೆಯಲ್ಲಿ ವಶ: ಸ್ಕೂಟರ್ ಸಹಿತ ಇಬ್ಬರು ಆರೋಪಿಗಳ ಬಂಧನ

Suddi Udaya

ನೆರಿಯ : ಬಾಂದಡ್ಕ ಸೇಸಪ್ಪ ಗೌಡ ರವರ ಮನೆಯ ಹಿಂಭಾಗದ ಗುಡ್ಡ ಕುಸಿತ

Suddi Udaya
error: Content is protected !!