April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯ

ತನ್ನ ವಿರುದ್ಧ ಯಾರೂ ಮಾತನಾಡುವವರು ಇಲ್ಲ ಎಂಬ ದುರಾಂಕಾರ ಮಹೇಶ್ ಶೆಟ್ಟಿಯವರಲ್ಲಿದೆ ಅವರದು ಶೇ 20 ಮಾತ್ರ ಹಿಂದುತ್ವ ಶೇ 80 ರೌಡಿಸಂ ಆಗಿದೆ: ಶಶಿರಾಜ್ ಶೆಟ್ಟಿ ಗುರುವಾಯನಕೆರೆ

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ, ಪತ್ರಿಕೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜರ ತೇಜೋವಧೆ ಮಾಡಿ, ಅವರು ಸಮಾಜಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ. ನಾನು ಹಿಂದು ಸಂಘಟನೆಗಾಗಿ ಕೆಲಸ ಮಾಡಿದಾಗ ನೀವು ಹುಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ಮಹೇಶ್ ಶೆಟ್ಟಿ ತಿಮರೋಡಿಯವರು ಬರುವ ಮೊದಲು ಹಿಂದೂ ಸಂಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಇತ್ತು. ಆವಾಗ ಮಹೇಶ್ ಶೆಟ್ಟಿಯವರು ಕೂಡಾ ಹುಟ್ಟಿರಲ್ಲಿಲ್ಲ ಇದನ್ನು ಅವರು ತಲೆಯಲಿಇಟ್ಟುಕೊಂಡು ಮಾತನಾಡಲಿ, ಅವರ ವಿರುದ್ಧ ಯಾರೂ ಮಾತನಾಡುವವರು ಇಲ್ಲ ಎಂಬ ದುರಾಂಕಾರ ಅವರಲ್ಲಿದೆ. ಅವರದು ಶೇ20 ಮಾತ್ರ ಹಿಂದುತ್ವ ಶೇ 80 ರೌಡಿಸಂ ಆಗಿದೆ ಎಂದು ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಹೇಳಿದರು.
ಅವರು ಗುರುವಾಯನಕೆರೆ ಬಂಟರ ಭವನದ ಸಭಾಂಗಣದಲ್ಲಿ ಮೇ 29ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಭಿನಂದನಾ ಸಭೆಯಲ್ಲಿ ಹರೀಶ್ ಪೂಂಜ ಅವರು ‘ನೀವು ಮೊನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಯಾವ ಕಾರಣಕ್ಕೆ ಬೆಂಬಲಿಸಿದಿರಿ, ನಾನು ಹಿಂದೂ ಸಮಾಜಕ್ಕೆ ಏನು ದ್ರೋಹ ಮಾಡಿದ್ದೇನೆ ಎಂದು ಹೇಳಿ ಎಂದು ಕೇಳಿದ್ದರು. ಆದರೆ ಈ ಪ್ರಶ್ನೆಗೆ ಉತ್ತರಿಸದ ಮಹೇಶ್ ಶೆಟ್ಟಿಯವರು ಹರೀಶ್ ಪೂಂಜರ ವಿರುದ್ಧ ಆಧಾರ ಇಲ್ಲದ ಆರೋಪಗಳನ್ನು ಮಾಡಿದ್ದಾರೆ. ಇದು ಹರೀಶ್ ಪೂಂಜ ಬೆಳ್ತಂಗಡಿ ತಾಲೂಕಿನಲ್ಲಿ ಸಣ್ಣ ಪ್ರಾಯದಲ್ಲೇ ನಾಯಕರಾಗಿ ಬೆಳೆದಿರುವುದನ್ನು ನೋಡಲಾಗದೆ ನಂಜಿ ಕಾರುತ್ತಿರುವುದಾಗಿದೆ ಎಂದರು.
ಸಮಾಜದಲ್ಲಿ ಯಾವುದಾದರೂ ವಿವಾದಿತ ಜಾಗ ಇದ್ದರೆ ಅದರ ಮಧ್ಯೆ ಪ್ರವೇಶಿಸಿ, ಒಬ್ಬರನ್ನು ಹಿಡಿದುಕೊಂಡು ಇನ್ನೊಬ್ಬನನ್ನು ತುಳಿದು, ಆ ಜಾಗವನ್ನು ಅವರೇ ಹಿಡಿದುಕೊಳ್ಳುತ್ತಾರೆ. ಇದಕ್ಕೆ ಪತ್ರಿಕಾಗೋಷ್ಟಿಯಲ್ಲಿ ಇದ್ದ ಇಬ್ಬರು ಸಾಕ್ಷಿಯಾಗಿದ್ದಾರೆ. ಹರೀಶ್ ಪೂಂಜ ಅವರು ಏಳೂವರೆ ವರ್ಷದ ಹಿಂದೆ ಬಂದವರು ಎಂದು ಮಹೇಶ್ ಶೆಟ್ಟಿಯವರು ಹೇಳಿದ್ದಾರೆ. ಏಳುವರೆ ವರ್ಷದ ಹಿಂದೆ ಬಂದ ಹರೀಶ್ ಪೂಂಜರು ಬಿಜೆಪಿಯನ್ನು ಕಟ್ಟಿ ಬೆಳೆಸಿ, ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಮತ ಪಡೆದು ವಿಜಯ ಸಾಧಿಸಿರುವುದು ಅವರ ತಾಕತ್ತಾಗಿದೆ ಎಂದರು.
ಮಹೇಶ್ ಶೆಟ್ಟಿಯವರನ್ನು ನಾಯಕರಾಗಿ ಮಾಡಿದವರು ಮೋಹನ್‌ರಾವ್ ಕಲ್ಮಜರವರು. ಬಾಂಬೆಯಿಂದ ಬಂದಾಗ ಮಹೇಶ್ ಶೆಟ್ಟಿಯವರನ್ನು ಹಿಂದೂ ಸಂಘಟನೆಯಲ್ಲಿ ತೊಡಗಿಸಲು ಪ್ರೇರೆಪಿಸಿದವರು ಅವರು ಆದರೆ ಮೋಹನ್‌ರಾವ್ ಕಲ್ಮಂಜದವರನ್ನು ತೇಜೋವಧೆ ಮಾಡಿದರು, ದೇವರಂತ ಮನುಷ್ಯ ಪಡ್ವೆಟ್ನಾಯರನ್ನು ಏಕವಚನದಲ್ಲಿ ತೇಜೋವಧೆ ಮಾಡಿದಾಗ ಅವರು ಕಣ್ಣಿರು ಇಟ್ಟಿದ್ದಾರೆ. ನೀವು ಅಣ್ಣಪ್ಪ, ಮಂಜುನಾಥ ಎಂದು ಹೇಳುತ್ತಿರಲ್ಲ, ದೇವರು ಇರುವುದು ಹೌದಾದರೆ, ನಿಜವಾದ ತಪ್ಪು ಮಾಡಿದವರಿಗೆ ದೇವರೆ ಶಿಕ್ಷೆ ಕೊಡುತ್ತಾರೆ ಎಂದು ಶಶಿರಾಜ್ ಹೇಳಿದರು.
ಮಸಿದಿಗೆ ಚರ್ಚೆಗೆ ಹಣ ಕೊಟ್ಟಿದ್ದಾರೆ ಎಂದು ಮಹೇಶ್ ಶೆಟ್ಟಿಯವರು ಹೇಳಿದ್ದಾರೆ. ಶಾಸಕನಾಗಿ ರಾಜಧರ್ಮವನ್ನು ಪಾಲಿಸಬೇಕು, ಮಸೀದಿಗೆ ಹಣ ಬರಬೇಕದರೆ ಎಂಎಲ್ ಲೇಟರ್ ಕೊಡಬೇಕಾಗಿಲ್ಲ, ಇದಕ್ಕೆ ಪ್ರತ್ಯೇಕ ವಕ್ಫ್ ಬೋರ್ಡು ಇದೆ. ಶಾಸಕರು ಬಂದ ನಂತರ ಆನೇಕ ಮಸೀದಿಗಳಾಗಿವೆ ಎಂದಿದ್ದಾರೆ. ಶಾಸಕರು ಬಂದ ನಂತರ ಏಷ್ಟು ಮಸೀದಿ ಆಗಿದೆ ಲೆಕ್ಕ ಕೊಡಲಿ, ಮಚ್ಚಿನದಲ್ಲಿ ಇವರ ಬೆಂಬಲಿಗರೇ, ಬಿಜೆಪಿಯಲ್ಲಿದ್ದವರು ಈಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಮಸಿದಿಗೆ ಪರವಾನಿಗೆ ಕೊಡಲಿಲ್ಲ ಎಂದು ಬಿಜೆಪಿ ಬಿಟ್ಟವರು ಇದನ್ನು ಮಹೇಶ್ ಶೆಟ್ಟಿಯವರು ತಿಳಿದುಕೊಳ್ಳಲಿ, ಇವರು ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕರಲ್ಲ, ಸುಳ್ಳು ಹೇಳಿ ತೇಜೋವಧಿ ಮಾಡುವುದು ಷಂಡತನ, ಶಾಸಕರು ಹೇಳಿದ ಪ್ರಶ್ನೆಗೆ ಉತ್ತರ ಕೊಡದೆ ಎಸ್‌ಡಿಪಿಐಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದಾಗ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಕುಳಿವರಿಗೆ ಆಶ್ವರ್ಯವಾಗಿದೆ ಎಂದರು.
ಬಿಜೆಪಿಯಲ್ಲಿ ಸ್ಪರ್ಧೇಗಾಗಿ ಸೀಟು ಕೇಳಿದವ ಮಹೇಶ್ ಶೆಟ್ಟಿಯವರೇ, ಪ್ರಭಾಕರ ಬಂಗೇರರನ್ನೇ ಸೋಲಿಸಿದವರು. ಅವರು ಬರುವಾಗ ಬಿಜೆಪಿಗೆ ೪ ಸಾವಿರ ಓಟು ಇರಲಿಲ್ಲ ಎನ್ನುತ್ತಾರೆ. ಬಿಜೆಪಿಗೆ ಪ್ರತಾಪಸಿಂಹ ನಾಯಕ್, ಪ್ರಸಾದ್ ಕುಮಾರ್‌ರತಂಹ ಹಿರಿಯ ನಾಯಕರು ಪಕ್ಷಕ್ಕಾಗಿ ದುಡಿದವರು, ಸುಬ್ರಹ್ಮಣ್ಯ ಕುಮಾರ್ ಅಗರ್ತ ಜಿ.ಪಂ ಚುನಾವಣೆಗೆ ನಿಂತಾಗ ಶಾಹುಲ್ ಹಮೀದ್ ಪರ ಮತ ಕೇಳಿದ್ದಕ್ಕೆ ನಮ್ಮಲ್ಲಿ ಸಾಕ್ಷಿ ಇದೆ. ಇವರು ಸಮಾಜದ ದಾರಿ ತಪ್ಪಿಸುವವರು. ಇವರಿಗೆ ತಾಕತ್ತಿದ್ದರೆ ಮೊನ್ನೆಯ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಬೇಕಿತ್ತು. ಇವರಿಗೆ ಎಷ್ಟು ಮತ ಬೀಳುತ್ತಿತ್ತು ಎಂದು ಗೊತ್ತಾಗುತ್ತಿತ್ತು ಎಂದು ಹೇಳಿದರು.
ಶಂಕರ್ ಶೆಟ್ಟಿ ತಿಮರೋಡಿ ಹಾಗೂ ಸದಾಶಿವ ಶೆಟ್ಟಿ ಸವಣಾಲು ಮಹೇಶ್ ಶೆಟ್ಟಿ ಅವರಿಂದ ತಮಗಾದ ಅನ್ಯಾಯದ ಬಗ್ಗೆ ತಮ್ಮ ನೋವನ್ನು ತೋಡಿಕೊಂಡರು. ನ್ಯಾಯವಾದಿ ಯತೀಶ್ ಶೆಟ್ಟಿ ಎಪಿವಿಪಿಯಲ್ಲಿ ಹರೀಶ್ ಪೂಂಜರ ಹೋರಾಟದ ಬಗ್ಗೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೋಪಾಲ ಪೂಜಾರಿ ಗರ್ಡಾಡಿ, ರಂಜಿತ್ ಶೆಟ್ಟಿ ಮದ್ದಡ್ಕ ಉಪಸ್ಥಿತರಿದ್ದರು.

Related posts

ಬಳ್ಳಮಂಜ ವಡ್ಡದಲ್ಲಿ ಶ್ರೀ ನಾಗ ಪ್ರತಿಷ್ಠೆ ಮತ್ತು ದೈವಗಳ ನೇಮೋತ್ಸವ

Suddi Udaya

ಹೊಸಂಗಡಿಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ ಅಂಗವಾಗಿ ಅಡಿಕೆ ಎಲೆ ಚುಕ್ಕಿ ರೋಗದ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ

Suddi Udaya

ಬದನಾಜೆ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ನಾರಾವಿ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿಗೆ ಶೇ.94.11 ಫಲಿತಾಂಶ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ: ವರದಿ ಸಾಲಿನಲ್ಲಿ 4,13,15,569 ವ್ಯವಹಾರ,13,49,980 ನಿವ್ವಳ ಲಾಭ. ಸದಸ್ಯರಿಗೆ 65% ಬೋನಸ್ ಹಾಗೂ 25% ಡಿವಿಡೆಂಡ್ ಘೋಷಣೆ: ದ್ವೀತಿಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!