25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜು

ಬೆಳಾಲು-ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯ ಶಾಲಾ ಪ್ರಾರಂಭೋತ್ಸವ

ಬೆಳಾಲು : ಮೇ 31 ಬೆಳಾಲು ಗ್ರಾಮದ‌ ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿನ 2023-24 ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸಂತೋಷ ಮಡಿವಾಳ ಇವರು ದೀಪ ಬೆಳಗಿಸಿ ಈ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಬೆಳಾಲು ಗ್ರಾ.ಪಂ ಸದಸ್ಯೆ ಶ್ರೀಮತಿ ‌ವಿದ್ಯಾ ಶ್ರೀನಿವಾಸ್ ಗೌಡ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯ ಹಾಗೂ ಉದ್ಯಮಿ ಜಯಣ್ಣ ಮಿನಂದೇಲು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಸಹ ಶಿಕ್ಷಕಿ ಜಯಶ್ರೀ ವಂದಿಸಿದರು.ಗೌರವ ಶಿಕ್ಷಕಿ ಭವ್ಯಶ್ರೀ ಸಹಕರಿಸಿದರು ಜಯಣ್ಣ ಮಿನಂದೇಲು ಇವರನ್ನು ಗೌರವಿಸಲಾಯಿತು.
ಎಸ್.ಡಿ.ಎಂ.ಸಿ ಸದಸ್ಯರು ,ಪೋಷಕರು,ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಪುಷ್ಪಗುಚ್ಚ ನೀಡಿ ಆರತಿ ಎತ್ತಿ ತಿಲಕವಿಟ್ಟು ಶಾಲೆಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ,ಓದುವ ಪುಸ್ತಕ‌, ಕ್ರೇಯಾನ್ಸ್, ರಬ್ಬರ್ ಪೆನ್ಸಿಲ್ ನ್ನು ಉದ್ಯಮಿ ಜಯಣ್ಣ ಮಿನಂದೇಲು ನೀಡಿ ಸಹಕರಿಸಿದರು ಹಾಗೂ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಆಕರ್ಷಣಿಯವಾಗಿತ್ತು.

Related posts

ವೇಣೂರು; ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆ

Suddi Udaya

ಕಣಿಯೂರು ಗ್ರಾಮದ ಪದ್ಮುಂಜ ಪ್ರೌಢ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನಾಳ: ಶ್ರೀ ದುರ್ಗಾ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಬಿಜೆಪಿ ಮುಖಂಡ ರಾಜೇಶ್ ಕೊಲೆ ಯತ್ನ ಪ್ರಕರಣ: ಆರೋಪಿ ಕುಶಾಲಪ್ಪ ಗೌಡ ಬಂಧನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya

ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!