April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜು

ಹೊಕ್ಕಾಡಿಗೋಳಿ ಶಾಲಾ ಪ್ರಾರಂಭೋತ್ಸವ

ಹೊಕ್ಕಾಡಿಗೋಳಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯಲ್ಲಿ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲಾ ಎಸ್.ಡಿ.ಎಂ.ಸಿ ಯವರು, ಹಳೆವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೊಸ ಮಕ್ಕಳನ್ನು ಬಲೂನ್ ಗಳನ್ನು ನೀಡಿ, ಆರತಿ ಬೆಳಗಿ ಶಾಲೆಗೆ ಸ್ವಾಗತಿಸಿದರು. ಸಾಲು ಹಣತೆಗಳನ್ನು ಹಚ್ಚಿ, ಮಗುವಿನ ಜೋಳಿಗೆ ತುಂಬಿಸುವ ಮೂಲಕ ವಿನೂತನವಾಗಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.

ಉಚಿತ ಪಠ್ಯ ಪುಸ್ತಕ, ಶಾಲಾ ಸಮವಸ್ತ್ರ ವಿತರಿಸಲಾಯಿತು. ದಾನಿಗಳಾದ ಧನ್ಯಶ್ರೀ ಕೆ ಮನೋಜ್ ಶೆಟ್ಟಿ ಪ್ರಾಯೋಜಿತ ಉಚಿತ ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ತಳಿರು ತೋರಣ, ರಂಗೋಲಿಗಳಿಂದ ಶಾಲೆಯನ್ನು ಅಲಂಕರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಅಜ್ಜಾಡಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸದಾಶಿವ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರಾಘವೇಂದ್ರ ಭಟ್, ಅಧ್ಯಕ್ಷರಾದ ಸಂತೋಷ್ ಮಂಜಿಲ, ಪ್ರದೀಪ್ , ಶಾಲಾ ಮುಖ್ಯ ಶಿಕ್ಷಕರಾದ ಸುಮಿತ್ರಾ ಎಸ್, ಶಿಕ್ಷಕರು, ಪೋಷಕರು, ಹಳೆವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಣಿಯೂರು ಮಹಾಶಕ್ತಿಕೇಂದ್ರದ ಸಭೆ

Suddi Udaya

ಕಳಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ್ ಶೆಟ್ಟಿ ಆಯ್ಕೆ

Suddi Udaya

ಬಂದಾರು ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಂದ ದಾಳಿ: ಸುಮಾರು 48 ಟನ್ ನಷ್ಟು ಅಕ್ರಮ ಮರಳು ವಶ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕೂಕ್ರಬೆಟ್ಟು ಶಾಲೆಯಲ್ಲಿ ನಾರಾವಿ ವಲಯ ಮಟ್ಟದ ವಾಲಿಬಾಲ್‌ ಪಂದ್ಯಾಟ: ಸಾವ್ಯ, ಅಂಡಿಂಜೆ ಶಾಲಾ ಮಕ್ಕಳು ಪ್ರಥಮ

Suddi Udaya

ವಲಯ ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟ: ಬರೆಂಗಾಯ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನಾಳ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ

Suddi Udaya
error: Content is protected !!