26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ: ದಿ| ಸುಶೀಲ ಪೂಜಾರ್ತಿರವರ ಪ್ರಥಮ ವರ್ಷದ ಪುಣ್ಯಸ್ಮರಣೆ: ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಮನ ಮೆಚ್ಚುವ ಕಾರ್ಯ, ಶಾಸಕ ಹರೀಶ್ ಪೂಂಜ ಭಾಗಿ

ಅಳದಂಗಡಿ: ಕರಂಬಾರು ಗ್ರಾಮದ ಊರ ನಿವಾಸಿ ಶ್ರೀಮತಿ ಸುಶೀಲರವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಅಶಕ್ತ ಕುಟುಂಬಗಳಿಗೆ ಆಹಾರ ಸಾಮ್ರಾಗಿ ವಿತರಣಾ ಕಾರ್ಯಕ್ರಮ‌ ನಡೆಯಿತು.

ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಹಲವಾರು ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಾಗ್ರಿ ವಿತರಣೆ, ಆರೋಗ್ಯ ನಿಧಿ ವಿತರಣೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊನ್ನಯ್ಯ ಕುಲಾಲ್ ನಡೆಸುತ್ತಿರುವ ಶ್ರೀ ಗುರು ಚೈತನ್ಯ ವೃದ್ದಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆ ಪಡೆದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ, ಊರ ಮತ್ತು ಸಹೋದರರು,ಕಿರಣ್ ಕುಮಾರ್ ಮಂಜಿಲ, ರತ್ನಾಕರ ಬುಣ್ಣನ್ ,ರಾಜೇಶ್ ಮೂಡುಕೋಡಿ, ಹರೀಶ್ ಕಲ್ಲಾಜೆ, ವಿಶ್ವನಾಥ ಬಂಗೇರ, ಸುರೇಂದ್ರ ಕುಮಾರ್ ಮುಂಬಯಿ, ದೇವದಾಸ್ ಆಲಡ್ಕ, ಗುರುವಪ್ಪ ಪೂಜಾರಿ, ಹರೀಶ್ ಕುಲಾಲ್, ಶುಭಕರ ಪೂಜಾರಿ, ಕಮಲಾಕ್ಷ ಉಂಗಿಲಬೈಲು ಹಾಗೂ ಕುಟುಂಬಸ್ಥರು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು

ಆಗಮಿಸಿದ ಗಣ್ಯ ಅತಿಥಿಗಳನ್ನು ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ನಾರಾಯಣ ಸ್ವಾಮಿ ಭೇಟಿ

Suddi Udaya

ಕೃಷ್ಣಪ್ಪ ಪೂಜಾರಿಯವರಿಗೆ ಪಿತಾಂಬರ ಹೇರಾಜೆಯವರಿಂದ ಗೌರವ

Suddi Udaya

ಬಿಜೆಪಿ ಬಜಿರೆ ಗ್ರಾಮದ ಬೂತ್ ಸಂಖ್ಯೆ 139ರ ಅಧ್ಯಕ್ಷರಾಗಿ ಚಂದ್ರಶೇಖರ, ಕಾರ್ಯದರ್ಶಿಯಾಗಿ ರಮಾನಾಥ ಪೂಜಾರಿ ಆಯ್ಕೆ

Suddi Udaya

ಗುಂಡೂರಿ ಶ್ರೀ ಸತ್ಯನಾರಾಯಣ ಪೂಜಾ ಮಂದಿರ ನಿರ್ಮಾಣಕ್ಕೆ ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ.2 ಲಕ್ಷ ದೇಣಿಗೆ ಹಸ್ತಾಂತರ

Suddi Udaya

ಮಾ14-15 ಎಸ್.ಡಿ.ಎಂ ಝೇಂಕಾರ ಉತ್ಸವ: ಖ್ಯಾತ ನಟ ರಮೇಶ್ ಅರವಿಂದ್ ವಿಶೇಷ ಆಕರ್ಷಣೆ

Suddi Udaya

ಧರ್ಮಸ್ಥಳದಲ್ಲಿ ನವಜೀವನ ಸದಸ್ಯರ ಶತದಿನೋತ್ಸವ: ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ

Suddi Udaya
error: Content is protected !!