25.7 C
ಪುತ್ತೂರು, ಬೆಳ್ತಂಗಡಿ
March 7, 2026
ಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳಾಲು ಪ್ರೌಢಶಾಲೆ ಆರಂಭೋತ್ಸವ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆರಂಭೋತ್ಸವವನ್ನು ಉಜಿರೆ ಶ್ರೀ ಧ ಮಂ ಎಜ್ಯುಕೇಶನಲ್ ಸೊಸೈಟಿ(ರಿ.) ಇದರ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಬಿ. ಸೋಮಶೇಖರ ಶೆಟ್ಟಿಯವರು ಉದ್ಘಾಟಿಸಿ ಮಾತನಾಡುತ್ತಾ, ಪ್ರೌಢಶಾಲೆಗೆ ಬರುವಾಗಲೆ ವಿದ್ಯಾರ್ಥಿಗಳಲ್ಲಿ ತನ್ನ ಜೀವನದ ಮುಂದಿನ ಗುರಿಯ ಬಗ್ಗೆ ಸ್ಪಷ್ಟ ನಿಲುವು ಅಗತ್ಯ. ಆ ಗುರಿಯನ್ನು ತಲಪುವಲ್ಲಿ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮತ್ತು ಏಕಾಗ್ರತೆ ಅವಶ್ಯಕ. ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳೆಲ್ಲ ಗುಣಮಟ್ಟಕ್ಕೆ ಹೆಸರಾಗಿದೆ. ಇಲ್ಲಿ ಜೀವನ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣಕ್ಕೆ ಆದ್ಯತೆ ಕೊಡಲಾಗುತ್ತದೆ. ಶಿಕ್ಷಣ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು ಎಂದು
ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಆಡಳಿತ ಮಂಡಳಿಯ ಮಾನವ ಸಂಪನ್ಮೂಲ ಅಧಿಕಾರಿ ಕೃಷ್ಣ ಮಯ್ಯರವರು ಶುಭಹಾರೈಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ ಮತ್ತು ಶಾಲೆಯ ಶಿಕ್ಷಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸ್ವಾಗತಿಸಿ , ಶಿಕ್ಷಕಿ ವಾರಿಜ ಎಸ್ ಗೌಡರವರು ವಂದಿಸಿದರು. ಶಿಕ್ಷಕರಾದ ಸುಮನ್ ಯು ಎಸ್ ರವರು ಕಾರ್ಯಕ್ರಮ ನಿರೂಪಿಸಿದರು.

Related posts

ಗ್ರಾಮೀಣ ಸರಕಾರಿ ಪ್ರೌಢಶಾಲೆಯಲ್ಲಿ ಹೀಗೊಂದು ವಿನೂತನ ಶೌಚಾಲಯ

Suddi Udaya

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನದಿಗೆ ಬಿದ್ದು ಸಾವು

Suddi Udaya

ಧರ್ಮಸ್ಥಳದ ಲತಾ ಆನೆ ಹೃದಯಾಘಾತದಿಂದ ಸಾವು

Suddi Udaya

ಸುದ್ದಿ ಉದಯ ವರದಿ ಫಲಶ್ರುತಿ: ಗುರುವಾಯನಕೆರೆ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಇದೀಗ ನಗರ ಪಂಚಾಯತ್ ವತಿಯಿಂದ ಮೋರಿ ಅಳವಡಿಕೆ

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಪರ್ಸಿನಿಂದ ರೂ 2.16ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಸಾವಿರ ನಗದು ಕಳವು

Suddi Udaya

ದೇವನಗುಲ್‌ ಚಾರ್ಮಾಡಿ ಅಡ್ಡ ರಸ್ತೆಗೆ ಗೇಟ್‌ – ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

Suddi Udaya
error: Content is protected !!