November 27, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರಾರಸಾನಿಗಮದ ಧರ್ಮಸ್ಥಳ ಘಟಕದ ಹಿರಿಯ ಚಾಲಕ, ಚಿನ್ನದ ಪದಕ ವಿಜೇತ ಹೆಚ್.ಪಿ.ರಾಜುರವರಿಗೆ ಬೀಳ್ಕೋಡುಗೆ

ಧರ್ಮಸ್ಥಳ : ಕರಾರಸಾನಿಗಮದ ಧರ್ಮಸ್ಥಳ ಘಟಕದಲ್ಲಿ ಕಳೆದ 37 ವರ್ಷಗಳಿಂದ ಚಾಲಕರಾಗಿ, ಹಿರಿಯ ಚಾಲಕರಾಗಿ, ಚಾಲಕರನ್ನು ತರಬೇತುಗೊಳಿಸುವ ಚಾಲಕ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜನಾನುರಾಗಿ ಚಿನ್ನದ ಪದಕ ವಿಜೇತರಾಗಿದ್ದ ಹೆಚ್.ಪಿ.ರಾಜು ರವರು ಮೇ 31 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು,ಇವರಿಗೆ ಬೀಳ್ಕೊಡುಗೆ ಸಮಾರಂಭವು ಧರ್ಮಸ್ಥಳ ಘಟಕದಲ್ಲಿ ಘಟಕ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ ಘಟಕದ ಎಲ್ಲಾ ಸಹೋದ್ಯೋಗಿಗಳ ಸಮ್ಮುಖದಲ್ಲಿ ಆಚರಿಸಿ ಫಲಪುಷ್ಪದೊಂದಿಗೆ ಹಾರತುರಾಯಿಗಳು ಶಾಲು ಪೇಟವನ್ನು ತೊಡಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನವನ್ನು ಮತ್ತು ಗೌರವ ಸಮರ್ಪಣೆ ಮಾಡಲಾಯಿತು.

ಸಮಾರಂಭಕ್ಕೆ ಕರಾರಸಾನಿಗಮದ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮತ್ತು ವಿಭಾಗ ಸಾರಿಗೆ ಅಧಿಕಾರಿ ಮುರಳೀಧರ ಆಚಾರ್ಯರವರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ದೇವಳ ನಿವೃತ್ತ ಮ್ಯಾನೇಜರ್ ಹಾಗೂ ಬೆಳ್ತಂಗಡಿ ತಾಲೂಕಿನ ಯಕ್ಷಪಟ್ಲ ಫೌಂಡೇಶನ್ ಶ್ರೀ ಭುಜಭಲಿಯವರು ಮತ್ತು ಘಟಕ ವ್ಯವಸ್ಥಾಪಕರಾದ ಎ. ಉದಯಶೆಟ್ಟಿಯವರು ಉಪಸ್ಥಿತರಿದ್ದು, ರಾಜಣ್ಣನವರ ಬಗ್ಗೆ ಉತ್ತಮ ಮಾತುಗಳನ್ನು ಆಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ನಂತರ ರಾಜಣ್ಣ ನವರು ಮಾತನಾಡಿ ತಮ್ಮ ಜೀವನದ ಯಶೋಗಾಥೆಯನ್ನು ಸಭೆ ತಿಳಿಸಿ ಜೀವನದಲ್ಲಿ ಆದರ್ಶವಾಗಿ ಬದುಕುವಂತೆ ಕಿವಿಮಾತು ಹೇಳಿದರು. ಮತ್ತು ಅವರ ನೆನಪಾಗಿ ಘಟಕಕ್ಕೆ ದೀಪಸ್ತಂಭವನ್ನು ನೀಡಿದರು. ಅಂತಿಮವಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಘಟಕ ವ್ಯವಸ್ಥಾಪಕರು ಮಾತನಾಡಿ ರಾಜಣ್ಣನವರ ಮುಂದಿನ ನಿವೃತ್ತಿ ಜೀವನ ಸುಖಮಯಕರವಾಗಿರಲಿ ಎಂದು ಎಲ್ಲರ ಪರವಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ನಿಗಮದ ನಿವೃತ್ತ ಸಹದ್ಯೋಗಿಗಳು ಮತ್ತು ರಾಜಣ್ಣ ನವರ ಸ್ನೇಹಿತ ವೆಂಕಟರಮಣ ಶೆಟ್ಟಿ, ಉಮೇಶ, ಧರ್ಮಸ್ಥಳದ ಉದ್ಯೋಗಿಗಳಾದ ರುದ್ರೇಶ, ಅಶೋಕ ಕುಮಾರ್,ಚೆನ್ನಯ್ಯ ಕೂಡಿಗೆ, ಹೆಚ್.ಎಸ್.ರವಿ, ರಾಜಣ್ಣನವರ ಪತ್ನಿ ಶ್ರೀಮತಿ ಸುಶೀಲ ರಾಜು ಮತ್ತು ಮಗಳು ಶ್ರೀಮತಿ ಕೃತಿ, ಅಳಿಯಂದಿರು ಮತ್ತು ಮೊಮ್ಮಕ್ಕಳು, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಮತಿ ಚಿತ್ರಾ ಡಿ ರವರು ರಾಜಣ್ಣ ನವರ ವ್ಯಕ್ತಿತ್ವದ ಪರಿಚಯ ಮಾಡಿದರು. ಸಿಬ್ಬಂದಿ ಮೇಲ್ವಿಚಾರಕ ಹೆಚ್.ಎಸ್.ರವಿ ನಿರೂಪಿಸಿದರು.

Related posts

ಬೆಳ್ತಂಗಡಿ ತಾ.ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ಅಧ್ಯಕ್ಷರಾಗಿ ಹರೀಶ್ ಕಾರಿಂಜ, ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು ಪುನರಾಯ್ಕೆ

Suddi Udaya

ಮುಂಡಾಜೆ: ಔಷಧೀಯ ಮೂಲಿಕಾ ವನ ನಿರ್ಮಾಣ 

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya

ಬಳಂಜ:ಕಾರಣಿಕದ ಬೊಳ್ಳಜ್ಜ ಧ್ವನಿ ಸುರುಳಿ ಬಿಡುಗಡೆ

Suddi Udaya

ಕುಕ್ಕೇಡಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ಪ್ರಕರಣ: ಮಾಲಕ ಸೈಯ್ಯದ್ ಬಶೀರ್ ಪೊಲೀಸ್ ವಶ

Suddi Udaya

ಇಂದಬೆಟ್ಟು: ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಬಂಗಾಡಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Suddi Udaya
error: Content is protected !!