April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

ಹೊಸಂಗಡಿ : ಹೊಸಂಗಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಜೂ. 1 ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳ್ತಂಗಡಿ ತೋಟಗರಿಕಾ ಇಲಾಖೆಯ ಹಿರಿಯ ನಿರ್ದೇಶಕ ಚಂದ್ರಶೇಖರ್ ಮಾರ್ಗದರ್ಶನ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು.

ಗ್ರಾಮಸಭೆಯಲ್ಲಿ ಪೆರಿಂಜೆ ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ವಸಂತಿ ಕೆ., ಬೆಳ್ತಂಗಡಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ನಿವೃತ್ತ ಕಿರಿಯ ಇಂಜಿನಿಯರ್ ತಮಣ ಗೌಡ ಪಾಟೀಲ್, ಪಂಚಾಯತ್ ನಲ್ಲಿ ನರೇಗಾ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿತೀಶ್ ಇವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ವ್ಯಾಪ್ತಿಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ವರದಿ, ಲೆಕ್ಕ ಪತ್ರ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಸಭೆಯಲ್ಲಿ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಗಳನ್ನು ಓದಿ ಅನುಮೋದನೆ ಪಡೆಯಲಾಯಿತು. ಇಲಾಖೆಯ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು.

Related posts

ಸಿ.ಎ. ಇಂಟರ್ ಮೀಡಿಯೆಟ್ ತರಬೇತಿ: ದೇಶಕ್ಕೆ 10ನೇ ರ್‍ಯಾಂಕ್ ಗಳಿಸಿದ ಬಜಿರೆಯ ದೀಪಕ್ ಹೆಗ್ಡೆ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ಯುವ ನಾಯಕ ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆ

Suddi Udaya

ಕನ್ಯಾಡಿ-I ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ ಚುನಾವಣೆ

Suddi Udaya

ಜಮಲಾಬಾದ್ ಇದ್ಗದಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಧರ್ಮಸ್ಥಳ : ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಕಡಿರುದ್ಯಾವರ ಜಿ. ಪಂ. ಹಿ. ಪ್ರಾ ಶಾಲಾ ಎಸ್.ಡಿ.ಎಮ್.ಸಿ ಹಾಗೂ ಪೋಷಕರ ಸಭೆ

Suddi Udaya
error: Content is protected !!