23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸರ್ಕಾರಿ ಇಲಾಖಾ ಸುದ್ದಿ

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ 18ನೇ ಶಾಖೆ ಮಡಂತ್ಯಾರಿನಲ್ಲಿ ಶುಭಾರಂಭ

ಮಡಂತ್ಯಾರು: ಪುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ರಾಜ್ಯಾದ್ಯಂತ 17 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 18 ನೇ ಶಾಖೆಯು ಜೂ. 2ರಂದು ಎ.ಎನ್ ಕಾಂಪ್ಲೆಕ್ಸ್ ಪ್ರಥಮ ಮಹಡಿ, ಎಸ್.ಬಿ.ಐ ಬ್ಯಾಂಕಿನ ಹತ್ತಿರ ಮುಖ್ಯ ರಸ್ತೆ ಮಡಂತ್ಯಾರಿನಲ್ಲಿ ಶುಭಾರಂಭಗೊಂಡಿತು.


ನೂತನ ಶಾಖೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಸುಸ್ಸಾನ, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ, ಕರ್ನಾಟಕ ರಾ.ಸೌ.ಸಂ.ಸ.ನಿ. ಬೆಂಗಳೂರು ಇದರ ನಿರ್ದೇಶಕರಾದ ಶ್ರೀಮತಿ ಭಾರತಿ ಜಿ ಭಟ್, ಸೌಹಾರ್ದ ಸಹಕಾರಿಗಳ ಜಿಲ್ಲಾ ಸಂಯೋಜಕರು ವಿಜಯ್, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಗೌಡ, ಎ. ಯನ್ ಕಾಂಪ್ಲೆಕ್ಸ್ ಮಡಂತ್ಯಾರು ಇದರ ಮಾಲಕರಾದ ಶ್ರೀಮತಿ ವಸಂತಿ ಜೆ ಶೆಟ್ಟಿ, ಭಾಗವಹಿಸಿದರು.

ಒಳಾಂಗಣ ವಿನ್ಯಾಸ ಮಾಡಿದ ಶಿವಪ್ರಸಾದ್ ರೈ ಹಾಗೂ ಇಲೆಕ್ಟ್ರಿಕ್ ಕೆಲಸ ಮಾಡಿದ ಜಯಂತ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕರುಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸುಷ್ಮಾ ಪ್ರಾರ್ಥಿಸಿದರು. ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಸ್ವಾಗತಿಸಿದರು, ಶಿವಪ್ರಸಾದ್ ನಿರೂಪಿಸಿದರು. ವ್ಯವಸ್ಥಾಪಕ ಪುರುಷೋತ್ತಮ ನಾಯಕ್ ಎನ್ ಧನ್ಯವಾದವಿತ್ತರು.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಡ್

Suddi Udaya

ನಾಳೆ(ಜೂ.12): ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

Suddi Udaya

ವೇಣೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಭೇಟಿ

Suddi Udaya

ಕೆನರಾ ಬ್ಯಾಂಕ್ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆ

Suddi Udaya
error: Content is protected !!