ಧರ್ಮಸ್ಥಳದಲ್ಲಿ “ರಾಜ್ಯಸಭೆಯಲ್ಲಿ ರಾಜರ್ಷಿ” ಕೃತಿ ಬಿಡುಗಡೆ

Suddi Udaya

ಬೆಳ್ತಂಗಡಿ: ಜೂ 2 ರಂದು ಧರ್ಮಸ್ಥಳದಲ್ಲಿ ಬೀಡಿನಲ್ಲಿ “ರಾಜ್ಯಸಭೆಯಲ್ಲಿ ರಾಜರ್ಷಿ” ಎಂಬ ಕೃತಿಯನ್ನು ಧಮಾ೯ಧಿಕಾರಿ‌ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ,ನಮ್ಮ ದೇಶದ ಭವ್ಯ ಪರಂಪರೆ,ಸಂಸ್ಕೃತಿಯ ಹಿನ್ನೆಲೆಯನ್ನು ಗಮನಿಸಿ ರಾಷ್ಟ್ರದ ಉಜ್ವಲ ಭವಿಷ್ಯವನ್ನು ರೂಪಿಸಬೇಕಾಗಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ಸೇವೆಯ ಜೊತೆಗೆ ಆನೇಕ ಸೇವಾಕಾರ್ಯಗಳೊಂದಿಗೆ ರಾಜ್ಯಸಭಾ ಸದಸ್ಯನಾಗಿ ದೇಶಸೇವೆ ಮಾಡುವ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ಒದಗಿಸಿದ್ದಾರೆ. ಅವರ ದಕ್ಷ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಜನಪರ ಸೇವಾ ಕಾರ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೆಗ್ಗಡೆಯವರು ಭರವಸೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕರ್ನಾಟಕದಲ್ಲಿ ಈಗಾಗಲೆ ಸಾಮಾನ್ಯ ಸೇವಾಕೇಂದ್ರಗಳ ಸೇವೆಗಳನ್ನು ಒದಗಿಸಿರುವುದಲ್ಲದೆ, ಹತ್ತು ಸಾವಿರ ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಒಂದೂವರೆ ಕೋಟಿ ಜನರಿಗೆ ಸರ್ಕಾರದ ಸೇವಾ ಸೌಲಭ್ಯಗಳನ್ನು ಈಗಾಗಲೆ ಒದಗಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯರ ನೆಲೆಯಲ್ಲಿ ತನಗೆ ದೊರೆತ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್‌ನಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದರು.ರಾಜ್ಯಸಭಾ ಸದಸ್ಯನಾಗಿ, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಅನೇಕ ಸಚಿವರನ್ನು ಗಣ್ಯರನ್ನು ಭೇಟಿಯಾಗಿ ಮಾತನಾಡುವ ಅವಕಾಶ ದೊರಕಿದೆ. ಎಲ್ಲರೂ ತನ್ನ ಮಾತಿಗೆ ವಿಶೇಷ ಗೌರವ, ಮಾನ್ಯತೆ ಕೊಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.ಡ್ರೋನ್ ಮೂಲಕ ಜಾಗದ ಅಳತೆ ಮಾಡಿ, ಹಕ್ಕುಪತ್ರ ನೀಡುವ ಕ್ರಮ ಮೊದಲಾದ ಅನೇಕ ಹೊಸ ಪದ್ಧತಿಗಳು ಸದ್ಯದಲ್ಲಿ ಬರಲಿವೆ.

ಈಗಾಗಲೇ ಒಂದು ವರ್ಷ ರಾಜ್ಯಸಭಾ ಸದಸ್ಯರ ಭಾಗವಹಿಸಿದ ವಿವರದ ಕೃತಿ ಇಂದು ಬಿಡುಗಡೆಯಾದ ಪುಸ್ತಕದಲ್ಲಿ ವಿವರಿಸಲಾಗಿದೆ.ಮುಂದೆ ಹೊಸ ಸಂಸತ್ ಭವನದಲ್ಲಿ ಇನ್ನೂ ಹೆಚ್ಚು ಸಕ್ರಿಯವಾಗಿ ಭಾಗವಹಿಸಿ, ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದು,ದೇಶಸೇವೆ ಮಾಡುವುದಾಗಿ ಹೆಗ್ಗಡೆಯವರು ಭರವಸೆ ನೀಡಿದರು. ಹೇಮಾವತಿ ವಿ. ಹೆಗ್ಗಡೆ ಉಪಸ್ಥಿತರಿದ್ದರು.ರಾಜ್ಯಸಭಾ ಸದಸ್ಯರ ಆಪ್ತಕಾರ್ಯದರ್ಶಿ ಕೆ.ಎನ್., ಜನಾರ್ದನ್ ಸ್ವಾಗತಿಸಿದರು.

Leave a Comment

error: Content is protected !!