September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಧ.ಮಂ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಉಜಿರೆ : ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ. 5 ರಂದು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯ ಇಲ್ಲಿನ ಪಾಲಕರಾದ ಯತೀಶ್ ಕೆ ಬಳ೦ಜ ಅವರು ಮಾತನಾಡಿ ಸಾವಯವ ಕೃಷಿಯ ಮಹತ್ವ ದ ಬಗ್ಗೆ ಅರಿವು ಮೂಡಿಸಿದರು , ಅಮೃತ ಜಲ ಮತ್ತು, ಎರೆಹುಳ ಗೊಬ್ಬರ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು ಹಾಗೂ ನೈತಿಕ ಶಿಕ್ಷಣ ಮತ್ತು ಜೀವನ ಶಿಕ್ಷಣದ ಮಹತ್ವದ ಕುರಿತು ಮನವರಿಕೆ ಮಾಡಿದರು.

ಶಾಲಾ ಮುಖ್ಯ ಶಿಕ್ಷಕರು ಬಾಲಕೃಷ್ಣ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಕರಕುಶಲದಿಂದ ರಚಿತವಾದ ಪರಿಸರ ಸಂರಕ್ಷಣಾ ವಿಷಯದ ಕುರಿತ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸುವುದರ ಮೂಲಕ ಉದ್ಘಾಟನೆಗೊಂಡಿತು. ನಂತರ ಮಾತನಾಡಿ ಪರಿಸರ ಮನುಷ್ಯನಿಗೆ ಜೀವ ರಕ್ಷಕ ಕವಚದಂತೆ ಕೆಲಸ ಮಾಡುತ್ತದೆ. ತುಳಸಿಯಂತಹ ಗಿಡಗಳು ಮನುಷ್ಯನಿಗೆ ಪ್ರಾಣ ವಾಯುವನ್ನು ಒದಗಿಸುತ್ತದೆ ಹೀಗಾಗಿ ಪರಿಸರ ರಕ್ಷಣೆ ಅತ್ಯಗತ್ಯ ಎಂದರು.

ವಿದ್ಯಾರ್ಥಿನಿಯರು ಪ್ರಾರ್ಥನೆಗೆ ಗೈದರು. ಶಾಲಾ ಸಹ ಶಿಕ್ಷಕ ಕೂಸಪ್ಪಗೌಡ ಅವರು ಪರಿಸರ ದಿನಾಚರಣೆಯ ಹಿನ್ನೆಲೆ, ಅಗತ್ಯತೆ, ಆರಂಭ, ಇತ್ಯಾದಿಗಳನ್ನು ತಿಳಿಸುವುದರ ಜೊತೆಗೆ ಮಕ್ಕಳಿಗೆ ಪರಿಸರವನ್ನು ಸಂರಕ್ಷಿಸುವ ಅನಿವಾರ್ಯತೆಯ ಕುರಿತು ಮನದಟ್ಟು ಮಾಡಿದರು.

ನಂತರ ಮಕ್ಕಳಿಗೆ ಸಹ ಶಿಕ್ಷಕಿ ಅನಷಾ ಇವರು ಪರಿಸರದ ಕುರಿತ ರಸಪ್ರಶ್ನ ಕಾರ್ಯಕ್ರಮ ನೆರವೇರಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಹ ಶಿಕ್ಷಕಿ ಕಾವ್ಯ ಕಾರ್ಯಕ್ರಮದ ನಿರೂಪಣೆಗೈದರು. ಸಹ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಸಹ ಶಿಕ್ಷಕ ವಿರಾಜ್ ಧನ್ಯವಾದವಿತ್ತರು .

Related posts

72 ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಾರಾವಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿರುವ ಎನ್.ಶಶಿಕಾಂತ್ ಜೈನ್ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ

Suddi Udaya

ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ

Suddi Udaya

ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ಧರ್ಮಸ್ಥಳ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ಮತ್ತು ಉಪನ್ಯಾಸಕರುಗಳ ವಾರ್ಷಿಕ ಕಾರ್ಯಾಗಾರ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಜಾವೆಲಿನ್ ಎಸೆತ: ಮಚ್ಚಿನ ಸ.ಪ್ರೌ. ಶಾಲಾ ವಿದ್ಯಾರ್ಥಿ ಮಹಮದ್ ಯಾಸ್ಮಿರ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!