September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಕ್ಷೇ.ಧ.ಮಂ. ಭಜನಾ ಪರಿಷತ್ ಬೆಳ್ತಂಗಡಿ ವತಿಯಿಂದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಮಾಧುರ್ಯರಿಗೆ ಸನ್ಮಾನ

ಬೆಳ್ತಂಗಡಿ : ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕರಾದ, ಹಾಗೂ ಶ್ರೀ ಕ್ಷೇತ್ರದ ಅನ್ನಪೂರ್ಣ ಅನ್ನಛತ್ರದ ಮುಖ್ಯ ಪ್ರಬಂಧಕರಾದ ಜಿ ಸುಬ್ರಹ್ಮಣ್ಯ ಪ್ರಸಾದ್ ರವರ ಪುತ್ರಿ ಮಾಧುರ್ಯ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಅವರ ಸ್ವಗೃಹಸ್ಪತಿ ಸುಮೇಧಾ ದಲ್ಲಿ ಸನ್ಮಾನ ನಡೆಸಲಾಯಿತು.

ಈ ವೇಳೆ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಮಾತನಾಡಿ ಈ ಅದ್ಭುತ ಕಲಿಕೆಯ ದಿನಗಳು ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿ. ಶಿಸ್ತು, ಕಠಿಣ ಪರಿಶ್ರಮ ಮತ್ತು ಸದಾ ಕಲಿಯುವ ಆಸಕ್ತಿ ನಿಮ್ಮದಾಗಲಿ. ನಿಮ್ಮ ಕನಸುಗಳೆಲ್ಲವೂ ನನಸಾಗುವಂತೆ ಆ ಭಗವಂತನು ನಿಮಗೆ ಸನ್ಮತಿ ನೀಡಲಿ. ಸದಾ ಉತ್ಸಾಹದಿಂದ ಹೊಸ ವಿಷಯಗಳನ್ನು ಕಲಿಯುತ್ತಾ ಜೀವನದಲ್ಲಿ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿ ಸುಬ್ರಹ್ಮಣ್ಯ ಪ್ರಸಾದ್, ತಾಯಿ ಮಧುರಾ, ತಮ್ಮ ಧನ್ವಿಕುಮಾರ್, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಗೌರವ ಸಲಹೆಗಾರರಾದ ನಾಗೇಶ್ ಬಿ ನೆರಿಯ, ಕಾರ್ಯದರ್ಶಿ ಚಂದ್ರಶೇಖರಗೌಡ ಇಂದಬೆಟ್ಟು , ಜೊತೆಕಾರ್ಯದರ್ಶಿ ಶ್ರೀಮತಿ ಪ್ರತಿಮಾ, ಕೋಶಾಧಿಕಾರಿ ಗಣೇಶ್ ಕನ್ನಾಜೆ, ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿಗಳಾದ ಸಂದೇಶ್ ಮದ್ದಡ್ಕ, ವಲಯ ಮೇಲ್ವಿಚಾರಕರಾದ ರವೀಂದ್ರ ಬಿ ಉಜಿರೆ, ವಲಯದ ಅಧ್ಯಕ್ಷರಾದ ಶ್ರೀಕೃಷ್ಣಯ್ಯ ಆಚಾರ್, ಶ್ರೀಮಂಜುನಾಥ್, ಶ್ರೀಮತಿ ವೇದಾವತಿ ಹೊನ್ನೇಶ್ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ಧರ್ಮಸ್ಥಳ: ಆಕಸ್ಮಿಕ ಗ್ಯಾಸ್ ಸೋರಿಕೆ: ಸುಟ್ಟು ಕರಕಲಾದ ಅಡುಗೆ ಮನೆ

Suddi Udaya

ರೇಷ್ಮೆರೋಡ್: ಅಶ್ವತನಗರ ನವರಾತ್ರಿ ಪೂಜೆ

Suddi Udaya

ಅಕ್ರಮವಾಗಿ ಚಿಕ್ಕಮಗಳೂರಿನಿಂದ ಸಾಲೆತ್ತೂರಿಗೆ ಗೋವುಗಳ ಸಾಗಾಟ: ವಾಹನ ಹಾಗೂ ಚಾಲಕರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

Suddi Udaya

ವಾಣಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ: ಹಣ್ಣಿನ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಸಂಕಲ್ಪ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya
error: Content is protected !!