ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಶಿಶಿಲ: ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದ್ರಿ ತಾಲೂಕು ವತಿಯಿಂದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ, ಹೇಮಾವತಿ ವೀ. ಹೆಗ್ಗಡೆಯವರು ಪ್ರೀತಿಯ ಕನಸಿನ ಕಾರ್ಯಕ್ರಮವಾದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ವಲಯದ ಶಿಶಿಲ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಶಿಲದಲ್ಲಿ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ನಡೆಸಲಾಯಿತು.

ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ, ಶಿಶಿಲೇಶ್ವರ ದೇವಸ್ಥಾನ ಶಿಶಿಲ ಆಡಳಿತ ಸಮಿತಿ ಸದಸ್ಯ ರಮೇಶ್, ಶಿಶಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂದೀಪ್ ಗೌಡ, ಬೆಳ್ತಂಗಡಿ ಯೋಜನಾಧಿಕಾರಿ ಯಶೋಧರ, ಶಿಶಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಗೌಡ, ಅರಸಿನಮಕ್ಕಿ ಜನಜಾಗೃತಿ ವಲಯ ವೇದಿಕೆ ಅಧ್ಯಕ್ಷ ಚನ್ನಪ್ಪ ಗೌಡ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ರಾಜ್ಯಾಧ್ಯಕ್ಷ ಚಂದ್ರಶೇಖರ್, ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಸಮನ್ವಯ ಅಧಿಕಾರಿ ಆಸ್ಪತ್ರೆಯ ಹೇಮಾವತಿ, ಕಣ್ಣಿನ ತಜ್ಞ ಡಾ| ಸುಭಾಷ್, ಇಎನ್‌ಟಿ ತಜ್ಞ ಡಾ| ರೋಹನ್ ದೀಕ್ಷಿತ್, ಚರ್ಮರೋಗ ತಜ್ಞ ಡಾ| ಭವಿಷ್ಯ, ಮೂಳೆ ತಜ್ಞ ಡಾ| ಪ್ರತೀಕ್ಷ್, ಮಕ್ಕಳ ತಜ್ಞ ಡಾ| ಪ್ರತೀತ್, ಜನರಲ್ ಮೆಡಿಸಿನ್ ವೈದ್ಯಾಧಿಕಾರಿ ಡಾ| ಪ್ರೌಷ್ಟಿಲ್ ಭಾಗವಹಿಸಿದ್ದರು.

ಎಸ್‌ಡಿಎಂ ಆಸ್ಪತ್ರೆಯ ಸಮನ್ವಯಧಿಕಾರಿ ಹೇಮಾವತಿ ಆಸ್ಪತ್ರೆಯಲ್ಲಿರುವ ವೈದ್ಯಾಧಿಕಾರಿಗಳ ಬಗ್ಗೆ ಮಂಗಳೂರಲ್ಲಿ ಸಿಗುವಂತಹ ಎಲ್ಲಾ ಪರೀಕ್ಷೆಗಳ ಸೌಲಭ್ಯವನ್ನು ಎಸ್‌ಡಿಎಂ ಆಸ್ಪತ್ರೆಗೆ ಡಾ|| ಹೆಗ್ಗಡೆಯವರು ಒದಗಿಸಿ ಕೊಟ್ಟಿದ್ದು ಗ್ರಾಮೀಣ ಭಾಗದ ಜನರಿಗೆ ಹತ್ತಿರದಲ್ಲಿಯೇ ಸುಸಜ್ಜಿತ ವ್ಯವಸ್ಥೆ ಯ ಚಿಕಿತ್ಸಾ ಸೌಲಭ್ಯವಿದ್ದು ಇದರ ಪ್ರಯೋಜನ ಪಡೆಯುವ ಬಗ್ಗೆ ಹಾಗೂ ಸಂಪೂರ್ಣ ಸುರಕ್ಷಾ ಸೌಲಭ್ಯದ ಬಗ್ಗೆ ಉಚಿತ ಡಯಾಲಿಸಿಸ್ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.

ತಾಲೂಕಿನ ಯೋಜನಾಧಿಕಾರಿ ಯಶೋಧರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಈ ಸೌಲಭ್ಯವನ್ನು ಒದಗಿಸಿ ಕೊಟ್ಟಿದ್ದು ಪ್ರಯೋಜನ ಪಡಕೊಳ್ಳುವಂತೆ ತಿಳಿಸಿದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ನಿರೂಪಿಸಿ, ವಲಯ ಮೇಲ್ವಿಚಾರಕಿ ಪ್ರಿಯ ಸ್ವಾಗತಿಸಿ ಸೇವಪ್ರತಿನಿಧಿ ರಶ್ಮಿತಾ ವಂದಿಸಿದರು.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಬಾಲಕಿ ಅಕ್ಷರಿ ಶೆಟ್ಟಿ

Suddi Udaya

ಅಂಡಿಂಜೆ: ಕಲ್ಲತ್ತಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗೇರು ಗಿಡಗಳಿಗೆ ಹತ್ತಿಕೊಂಡ ಬೆಂಕಿ

Suddi Udaya

ಚಾರುಕೀರ್ತಿಭಟ್ಟಾರಕ ಸ್ವಾಮೀಜಿಯವರಿಂದ “ರತ್ನತ್ರಯ ಸಿದ್ಧಿಸೋಪಾನ” ಶಾಸ್ತ್ರದಾನ ಕೃತಿ ಬಿಡುಗಡೆ

Suddi Udaya

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ‌ ಬಕ್ರೀದ್ ಆಚರಣೆ-ಸಾಮೂಹಿಕ ಪ್ರಾರ್ಥನೆ

Suddi Udaya
error: Content is protected !!