ಅಳದಂಗಡಿ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯು ಜೂ 4ರಂದು ಸೋಮನಾಥೇಶ್ವರಿ ಭಜನಾ ಮಂಡಳಿಯ ಆವರಣದಲ್ಲಿ ನಡೆಯಿತು
ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ನಾರಾಯಣ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿ ದಯಾನಂದ ಹಾಗೂ ವಲಯ ಮೇಲ್ವಿಚಾರಕಿ ಶ್ರೀಮತಿ ಸುಮಂಗಲ ಉಪಸ್ಥಿತರಿದ್ದರು.
ಗುರುವಾಯನಕೆರೆ ಶೌರ್ಯ ಸಮಿತಿಯ ಕ್ಯಾಪ್ಟನ್ ಸತೀಶ್ ಆಚಾರ್ಯ ಸಭೆಯಲ್ಲಿ ಭಾಗವಹಿಸಿ ಘಟಕಕ್ಕೆ ಶುಭ ಹಾರೈಸಿದರು. ಯೋಜನಾಧಿಕಾರಿಯವರು ಹತ್ತು ಹಲವು ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಂದಿನ ದಿನಗಳಲ್ಲಿ ಗಿಡ ನಾಟಿ ಕಾರ್ಯಕ್ರಮ ಆರೋಗ್ಯ ತಪಾಸಣಾ ಶಿಬಿರ ಅಗ್ನಿಶಾಮಕದವರಿಂದ ತರಬೇತಿ ನೀಡುವ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ತುರ್ತು ಸಂದರ್ಭ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಸಂಘ ಸಂಸ್ಥೆಗಳ ಜೊತೆ ಸಹಕರಿಸುವಂತೆ ಆಯಾ ಸಂಘ ಸಂಸ್ಥೆಗಳ ಮನವಿಯನ್ನು ಪರಿಗಣಿಸಿ ಸ್ಪಂದಿಸುವುದನ್ನು ತೀರ್ಮಾನಿಸಲಾಯಿತು. ವಿವಿಧ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಸಂಯೋಜಕರಾದ ಶ್ರೀಕಾಂತ್, ಶ್ರೀಮತಿ ಹರಿಣಾಕ್ಷಿ, ಘಟಕ ಪ್ರತಿನಿಧಿಗಳಾದ ರಾಜೇಶ್, ಶ್ರೀಮತಿ ಶಕುಂತಲಾ, ಸ್ವಯಂ ಸೇವಕರಾದ ನಾರಾಯಣ ಸಾಲಿಯಾನ್, ಶಿವಾನಂದ ಪ್ರಕಾಶ್ ಕೊಲ್ಲಂಗೆ, ಶುಭಕರ ಪೂಜಾರಿ, ರವಿ ಪೂಜಾರಿ, ಜಯಕುಮಾರ್, ರವಿಚಂದ್ರ, ಅಶೋಕ್ ಪಿ, ಯಶೋದರ ಸುವರ್ಣ, ಆಶಾ, ನಳಿನಿ, ಹೇಮಾವತಿ, ಅಮಿತಾ, ರೂಪಶ್ರೀ, ಸರಸ್ವತಿ, ಹರ್ಷಲಾ, ಸೋಮನಾಥ ಶಿರ್ಲಾಲು, ದಿನೇಶ್ ಬಿ, ಜಗದೀಶ್, ಪ್ರವೀಣ್, ಉಪಸ್ಥಿತರಿದ್ದರು.
ಸಂಯೋಜಕ ಶ್ರೀಕಾಂತ್ ಸ್ವಾಗತಿಸಿದರು. ಸಂಯೋಜಕಿ ಶ್ರೀಮತಿ ಹರಿಣಾಕ್ಷಿ ವರದಿಯನ್ನು ಓದಿದರು. ಸ್ವಯಂಸೇವಕ ಅಶೋಕ್ ವಂದಿಸಿದರು.