ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಜಂಟಿ ಸಭೆ

Suddi Udaya

ಬೆಳ್ತಂಗಡಿ: ಸೌತ್ ಕೆನೆರಾ ಡಿಸ್ಟ್ರಿಕ್ಟ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಹಾಗೂ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ ಇವುಗಳ ಜಂಟಿ ಸಭೆಯು ಜೂ 5 ರಂದು ಉಜಿರೆಯ ಕಾಶಿಬೆಟ್ಟು ಬಳಿಯ ಅರಳಿ ರಸ್ತೆಯ ರೋಟರಿ ಸಭಾ ಭವನದಲ್ಲಿ ನಡೆಯಿತು.

ಜಿಲ್ಲಾ ಸಂಘದ ಅಧ್ಯಕ್ಷ ಸುಜಿತ್ ಭಿಡೆ ಅವರು ಪ್ರಸ್ತಾವನೆಗೈದರು. ಉಪಾಧ್ಯಕ್ಷ ಸುನೀಲ್ ನಾಯಕ್ ಅವರು ಔಷಧಿ ವ್ಯಾಪಾರದ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಹಾಗೂ ಅನಾರೋಗ್ಯಕರ ಪೈಪೋಟಿಗಳ ಬಗ್ಗೆ ಮಾತನಾಡಿದರು. ಗೌರವಾಧ್ಯಕ್ಷರಾದ ಚಿತ್ತರಂಜನ್ ಅವರು ಸಂಘದ ಔಷಧಿ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಲೆಕ್ಕ ಪತ್ರ ಪರಿಶೋಧಕರಿಂದ ಅಂಗೀಕೃತವಾದ ವಾರ್ಷಿಕ ಲೆಕ್ಕಪತ್ರ ವನ್ನು ಮಂಡಿಸಲಾಯಿತು. ಇದೇ ಸಂದರ್ಭದಲ್ಲಿ ವ್ಯವಹಾರ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿದ ಬೆಳ್ತಂಗಡಿಯ ಅಮರ್ ಡ್ರಗ್ ಹೌಸ್ ಮಾಲೀಕ ಗಣಪತಿ ಭಟ್, ಹಾಗೂ ಗೌರವ ಡಾಕ್ಟರೇಟ್ ಪಡೆದ ಎ.ಕೆ .ಜಮಾಲ್ ಅವರನ್ನು ಗೌರವಿಸಲಾಯಿತು.

ಸಭೆಯಲ್ಲಿ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳೊಡನೆ ವ್ಯವಹಾರದ ಬಗ್ಗೆ ಸಂವಾದ ನಡೆಯಿತು. ಹಾಗೂ ವಾರ್ಷಿಕ ಮಹಾ ಸಭೆಯನ್ನು ನಡೆಸುವ ಬಗ್ಗೆ ದಿನಾಂಕವನ್ನು ನಿಗದಿಪಡಿಸಲಾಯಿತು.

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ, ಉಪಾಧ್ಯಕ್ಷ ಮಂಗಳೂರಿನ ಸುನೀಲ್ ನಾಯಕ್, ಕಾರ್ಯದರ್ಶಿ ಮಂಗಳೂರಿನ ಗುರುಚರಣ್ ರಾವ್, ಜೊತೆ ಕಾರ್ಯದರ್ಶಿ ವಾಲ್ಟರ್ ಡಿ ಕುನ್ಹಾ ಕೋಶಾಧಿಕಾರಿ ಬಿ.ಸಿ.ರೋಡ್ ನ ವಿನಯ್ ರೈ ಉಪಸ್ಥಿತರಿದ್ದರು.

ಸಭೆಯಲ್ಲಿ ದ.ಕ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಔಷಧಿ ವ್ಯಾಪಾರಿಗಳು ಆಗಮಿಸಿದ್ದರು.

ತಾಲೂಕು ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ. ಸ್ವಾಗತಿಸಿ,ಜಿಲ್ಲಾ ಕಾರ್ಯದರ್ಶಿ ಗುರುಚರಣ್ ರಾವ್ ವಂದಿಸಿದರು.

Leave a Comment

error: Content is protected !!