April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸೂರಜ್ ಬಳಂಜ ಹೆಚ್. ಪೂಜಾರಿ ಆಯ್ಕೆ

ಬಳಂಜ: 2021 ರ ಡಿಸೆಂಬರ್ ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್ಸಿ )ನಡೆಸಿದ ಪಿಡಬ್ಲ್ಯೂಡಿ ಇಲಾಖೆಯ ಕಿರಿಯ ಇಂಜಿನಿಯರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೂರಜ್ ಬಳಂಜರವರು ಕರ್ನಾಟಕ ರಾಜ್ಯಕ್ಕೆ 20ನೇ ರ್‍ಯಾಂಕ್ ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ರ್‍ಯಾಂಕ್ ಪಡೆದಿದ್ದಾರೆ.

ಪ್ರಸ್ತುತ ಕಾರವಾರ ಜಿಲ್ಲೆಯ ಭಟ್ಕಳ ತಾಲೂಕಿನ ಪಿಡಬ್ಲ್ಯೂಡಿ ಉಪವಿಭಾಗಕ್ಕೆ ಕಿರಿಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲು ಸರ್ಕಾರ ಸ್ಥಳ ನಿಯೋಜಿಸಿದೆ.

ವಿದ್ಯಾರ್ಥಿ ಜೀವನದಿಂದಲೇ ಚುರುಕು ಸ್ವಭಾವವನ್ನು ಬೆಳೆಸಿಕೊಂಡು ಓದು, ಬರಹ, ಕ್ರೀಡೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.

ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬಳಂಜ ಬಿಲ್ಲವ ಸಂಘದ ಸದಸ್ಯರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಇವರು ಬಡಗಕಾರಂದೂರು ಗ್ರಾಮದ ಹಾನಿಂಜ ದಿ. ವಾಸು ಪೂಜಾರಿ ಮತ್ತು ಶ್ರೀಮತಿ ಸುಂದರಿ ಇವರ ಸುಪುತ್ರ.

Related posts

ಗಡಾಯಿಕಲ್ಲು ಚಾರಣಕ್ಕೆ ಮುಂದಿನ ಆದೇಶದವರೆಗೆ ನಿಷೇಧ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವಿರುದ್ಧ ಕೇಸು ದಾಖಲು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡನೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಡಿಸೆಂಬರ್ ತಿಂಗಳಲ್ಲಿ ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Suddi Udaya

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya

ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಸಿಯೋನ್ ಆಶ್ರಮದಿಂದ ಉಚಿತ ಮಜ್ಜಿಗೆ ವಿತರಣೆ

Suddi Udaya
error: Content is protected !!