ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಜೂ:08 ರಂದು ಅಧ್ಯಕ್ಷರಾದ ಶ್ರೀಮತಿ ಸುಭಾಷಿಣಿ.ಕೆ.ರವರ ಅಧ್ಯಕ್ಷತೆಯಲ್ಲಿ ಜರಗಿತು.
ವಾರ್ಡ್ ಸಭೆ ಮತ್ತು ಗ್ರಾಮ ಸಭೆ ನಡೆಸುವ ಕುರಿತು ಚರ್ಚಿಸಲಾಯಿತು. ಮಳೆಗಾಲ ಪ್ರಾರಂಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚರಂಡಿ ಮತ್ತು ಚರಲ್ ಹಾಕಿ ರಸ್ತೆಗಳನ್ನು ದುರಸ್ಥಿ ಪಡಿಸಲು ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಿ ಮಾಡುವುದೆಂದು ತೀರ್ಮಾನಿಸಲಾಯಿತು. ಸರಕಾರದ ವಿವಿದ ಇಲಾಖೆಗಳ ಸುತ್ತೋಲೆಗಳನ್ನು ಸಭೆಗೆ ಓದಿ ಹೇಳಲಾಯಿತು. ರಸ್ತೆ ಬದಿಯಲ್ಲಿರುವ ಅಪಾಯದಂಚಿನ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಪತ್ರ ಬರೆಯುವುದೆಂದು ತೀರ್ಮಾನಿಸಲಾಯಿತು. ನ್ಯಾಯ ಸಮಿತಿಗೆ ಬಂದ ವಿವಿದ ಅರ್ಜಿಗಳನ್ನು ಸ್ಥಳ ತನಿಖೆ ನಡೆಸುವುದೆಂದು ದಿನಾಂಕ ನಿಗದಿಪಡಿಸಲಾಯಿತು. ಏಲಂ ಅವಧಿ ಮುಗಿದ ಮೀನು ಮಾರುಕಟ್ಟೆಯನ್ನು ಏಲಂ ಮಾಡುವುದೆಂದು ತೀರ್ಮಾನಿಸಲಾಯಿತು. ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಕುಂಞ ಕೆ ಸ್ವಾಗತಿಸಿ ಕೊನೆಯಲ್ಲಿ ದನ್ಯವಾದವಿತ್ತರು.