24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ: ಶಾಲಾ ನಾಯಕನಾಗಿ ಸಾತ್ವಿಕ್ ರಾವ್ ಮತ್ತು ಉಪ ನಾಯಕನಾಗಿ ಪ್ರಾಂಜಲ್ ಆಯ್ಕೆ

ಉಜಿರೆ : ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಉಜಿರೆಯಲ್ಲಿ ಜೂನ್ 9 ರಂದು ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ ನಡೆಯಿತು.

ಶಾಲಾ ವಿದ್ಯಾರ್ಥಿಗಳು ಶಾಲಾ ನಾಯಕನಾಗಿ ಸಾತ್ವಿಕ್ ರಾವ್ ಹಾಗೂ ಶಾಲಾ ಉಪ ನಾಯಕನಾಗಿ ಪ್ರಾಂಜಲ್ ಇವರನ್ನು ಆಯ್ಕೆ ಮಾಡಿರುತ್ತಾರೆ.

ಇನ್ನುಳಿದಂತೆ ಶಿಕ್ಷಣ ಮಂತ್ರಿಯಾಗಿ ಪಹಲ್ ಜೈನ್, ನೀರಾವರಿ ಮಂತ್ರಿ ಫಹೀಮ್, ಸಾಂಸ್ಕೃತಿಕ ಮಂತ್ರಿ ದೇವೇಂಜನ್, ಆರೋಗ್ಯ ಮಂತ್ರಿ ಹಸ್ನ, ಕ್ರೀಡಾ ಮಂತ್ರಿ ಆಶ್ಲೇಷ್ ಇವರನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿರುತ್ತಾರೆ ಹಾಗೂ ಆಯ್ಕೆಗೊಂಡ ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನು ಶಿಕ್ಷಕ ವೃಂದದವರು ಅಭಿನಂದಿಸಿದರು.

ಶಾಲಾ ಪ್ರಾಂಶುಪಾಲರಾದ ಮನಮೋಹನ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದರು. ಶಾಲಾ ಸಂಸತ್ತು ಸಂಯೋಜಕರಾದ ಸವಿತಾ ಮತ್ತು ಗಣೇಶ್ ಚುನಾವಣೆಯ ಜವಾಬ್ದಾರಿ ವಹಿಸಿದ್ದರು.

Related posts

ಆರಂಬೋಡಿ ದ.ಕ.ಜಿ.ಪಂ.ಉ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ರಚನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಸ್ಕೌಟ್ ಗೈಡ್ ಬೇಸಿಗೆ ಶಿಬಿರ

Suddi Udaya

ಬೆಳ್ತಂಗಡಿ: ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಕೆ ಗಂಗಾಧರ ಗೌಡರವರ ನೂತನ ಕಛೇರಿ ಉದ್ಘಾಟನೆ

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಮಾಚಾರು ಗೋಪಾಲ ನಾಯ್ಕ ಅವರ ನಿಧನಕ್ಕೆ ದ.ಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ರವರಿಂದ ಸಂತಾಪ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ., ಪಟ್ಟಣ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆ

Suddi Udaya
error: Content is protected !!