ಧರ್ಮಸ್ಥಳ: ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಯಕತ್ವ ತರಭೇತಿ ಕಾರ್ಯಾಗಾರವನ್ನು ಜೂ 9 ರಂದು ಹಮ್ಮಿಕೊಳ್ಳಲಾಯಿತು .
ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿ ಶ್ರೀಹರಿ ಶಗ್ರಿತ್ತಾಯ ಆಗಮಿಸಿ, ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಮನೆಯಲ್ಲಿಯೇ ಮೈಗೂಡಿಸಿಕೊಳ್ಳಲು ಸಾಧ್ಯ. ಆಗ ಸಮಾಜವನ್ನು ಅರಿಯಲು ಸಾಧ್ಯವಾಗುತ್ತದೆ.ನಾಯಕನಾಗಿರಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಯಕತ್ವ ಹೇಗಿರಬೇಕು, ಅವನ ಗುಣಗಳು ಹೇಗಿರಬೇಕು, ವಿವಿಧ ರೀತಿಯ ನಾಯಕರುಗಳು, ನಾಯಕನ ಜವಾಬ್ದಾರಿ ಏನು ,ಎಂಬುದನ್ನು ಅವರು ಉದಾಹರಣೆ, ಕಗ್ಗದ ವಚನಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯಲ್ಲಿ ಮಂತ್ರಿಮಂಡಲದ ಅಗತ್ಯ ಮತ್ತು ನಾಯಕನ ಮಹತ್ವ ವಿವರಿಸಿ ಎಲ್ಲರನ್ನೂ ಸ್ವಾಗತಿಸಿದರು.
ಕುಮಾರಿ ಆದ್ಯ ಕಾರ್ಯಕ್ರಮ ನಿರೂಪಿಸಿ, ನಿಧೀಕ್ಷಾ ಅತಿಥಿಗಳನ್ನು ಪರಿಚಯಿಸಿ, ವೀಕ್ಷಾ ವಂದಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.