ಬಂಗಾಡಿ :ಬೆದ್ರಬೆಟ್ಟು ಇಲ್ಲಿನ ಪ್ರತಿಷ್ಟಿತ ಮರಿಯಾoಬಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಧಿಕೃತವಾಗಿ ಶಾಲಾ ಶೈಕ್ಷಣಿಕ ವರ್ಷ ಕ್ಕೆ ಪ್ರಾರಂಭ ಜೂ.8ರಂದು ನೀಡಲಾಯಿತು.
ಮಕ್ಕಳ ನಡಿಗೆ ಉತ್ತಮ ಫಲಿತಾ೦ಶದೆಡೆಗೆ ಎಂಬ ಘೋಷಣೆಯೊಂದಿಗೆ ದೀಪ ಬೆಳಗಿಸಿ ಶೈಕ್ಷಣಿಕ ವರ್ಷವನ್ನು ಕರ್ನಾಟಕ ಕ್ಯಾಥೋಲಿಕ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಸೊಸೈಟಿ ಯ ಕಾರ್ಯದರ್ಶಿ ವಂ. ಶಾಜಿ ಮಾತ್ಯು ಉದ್ಘಾಟಿಸಿದರು. ಉತ್ತಮ ಫಲಿತಾಂಶದ ಕನಸನ್ನು ಆರಂಭದಲ್ಲೇ ಕಂಡು ಅದನ್ನು ಸಾಕಾರಗೊಳಿಸುವ ಪ್ರಯತ್ನಕ್ಕೆ ಶೈಕ್ಷಣಿಕ ವರ್ಷವನ್ನು ಮೀಸಲಿಟ್ಟಾಗ ಎಲ್ಲಾ ವಿದ್ಯಾರ್ಥಿಗಳಿಗೂ ಗುರಿ ಮುಟ್ಟಲು ಸಾಧ್ಯ ಎಂದು ಕಾರ್ಯದರ್ಶಿ ವಂ. ಶಾಜಿಮಾತ್ಯು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ನಾಯಕತ್ವ ಗುಣ ಬೆಳೆಸಲು ವಿದ್ಯಾರ್ಥಿಮಂತ್ರಿ ಮಂಡಲದ ರಚನೆ ಚುನಾವಣೆ ಮೂಲಕ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ವಂ. ಸೇಬಾಸ್ಟಿನ್ ಸಿ ಕೆ, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕರಿಸಿದ ಅಧ್ಯಾಪಕರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯಿನಿ ವಂ. ಭಗೀನಿ ಸಿ| ಶೆರಿನ್ ಎಸ್ ಎ ಬಿ ಎಸ್ ಉಪಸ್ಥಿತರಿದ್ದರು.
ಸಹ ಶಿಕ್ಷಕ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕ ಜೀವನ್ ಪ್ರದೀಪ್ ಸ್ವಾಗತಿಸಿ, ಶಿಕ್ಷಕಿ ಮರೀಟಾ ವಂದಿಸಿದರು.