ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ರಾಷ್ಟ್ರೀಯ ಸೇವಾ ಯೋಜನೆ ರೋವರ್‍ಸ್ ಮತ್ತು ರೇಂಜರ್‍ಸ್ ಐ.ಕ್ಯೂ.ಎ.ಸಿ, ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗುರುವಾಯನಕೆರೆ ವಲಯ ಇವರ ಸಹಯೋಗದೊಂದಿಗೆ ವಿಶ್ವ ತಂಬಾಕು ವಿರೋಧಿ ದಿನವನ್ನು ಆಚರಿಸಲಾಯಿತು.

ಶ್ರೀಮತಿ ಶಾರದಾ ರೈ ಅಧ್ಯಕ್ಷರು, ತಾಲೂಕು ಜನ ಜಾಗೃತಿ ವೇದಿಕೆ ಇವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಯುವ ಜನತೆ ಮಾದಕ ವ್ಯಸನಗಳಿಂದ ದೂರವಿರಲು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾದ ಗಣೇಶ್ ಆಚಾರಿ ಯೋಜನಾಧಿಕಾರಿಗಳು, ಉಡುಪಿ ಪ್ರಾದೇಶಿಕ ವಿಭಾಗ ಜನಜಾಗೃತಿ ವೇದಿಕೆ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯುವ ಜನತೆಯನ್ನು ಡಿಎಡಿಕ್ಸನ್ ಕೇಂದ್ರಗಳಿಗೆ ಬರುವುದನ್ನು ತಡೆಯುವುದು ಈ ಜಾಗೃತಿ ಕಾರ್ಯಕ್ರಮದ ಉದ್ದೇಶ ಎಂದರು. ಆರೋಗ್ಯ ಪೂರ್ಣ ಜೀವನ ಪದ್ಧತಿಯನ್ನು ಬೆಳೆಸುವುದು ಈ ದಿನದ ಅಗತ್ಯವೆಂದರು.

ದಯಾನಂದ್ ಪೂಜಾರಿ , ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಇವರು ಪ್ರಸ್ತಾವಿಕವಾಗಿ ಮಾತನಾಡಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ಜನ ಜಾಗೃತಿ ಉದ್ಧೇಶವೆಂದರು. ಕಿಶೋರ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷರ ಜನ ಜಾಗೃತಿ ವೇದಿಕೆ ಬೆಳೆದು ಬಂದ ರೀತಿ, ಅದರ ಸಾಧನೆ ಬಗ್ಗೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಸದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಬ್ರಹ್ಮಣ್ಯ ಕೆ. ಇವರು ಯುವ ಜನತೆ ಶಿಕ್ಷಣ ಪಡೆದು ವಿವೇಕ ಜಾಗೃತಿಗೊಳ್ಳಬೇಕೆಂದರು. ಅಚ್ಚ್ಯತ ಕುಮಾರ್ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಡಾ. ರವಿ ಎಂ. ಎನ್. ಸ್ನಾತಕೋತ್ತರ ವಿಭಾಗದ ಸಂಚಾಲಕರು. ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯ ರಾ.ಸೇ.ಯೋಜನಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಸಂಘಟಿಸಿದರು. ಸುರೇಶ್ ಡಿ, ಆಂಗ್ಲಭಾಷಾ ಉಪನ್ಯಾಸಕರು ಸಹಕರಿಸಿದರು. ಕು.ಮಾಲಾತಿ ಹಾಗೂ ಬಳಗ ಪ್ರಥಮ ಬಿ.ಎ ಪ್ರಾರ್ಥಿಸಿದರು. ಕು ಸ್ನೇಹಾ ಸ್ವಾಗತಿಸಿದರು. ಕು ಪ್ರತಿಕ್ಷಾ ಪ್ರಥಮ ಬಿ.ಬಿ.ಎ ವಂದಿಸಿದರು, ಕು.ಉಮಾವತಿ ಪ್ರಥಮ ಬಿ.ಎ ನಿರೂಪಿಸಿದರು.

Related posts

ಕೊಯ್ಯೂರು ಶಾಲೆಗೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಬಟ್ಟಲು ವಿತರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶೇ 81.49 ಮತದಾನ: 2,28,871 ಮತದಾರರಲ್ಲಿ 1,86,506 ಮಂದಿ ಮತ ಚಲಾವಣೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

Suddi Udaya

Leave a Comment

error: Content is protected !!