23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸರಕಾರಿ ಪ್ರೌಢಶಾಲೆ ನಡ – ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆ: ಶಾಲಾ ನಾಯಕಿ ಇಂಚಿತಾ, ಉಪ ನಾಯಕನಾಗಿ ಹೃತಿಕ್ ಆಯ್ಕೆ

ನಡ: ಸರಕಾರಿ ಪ್ರೌಢಶಾಲೆ ನಡ ಇದರ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಶಾಲಾ ನಾಯಕಿಯಾಗಿ ಕುಮಾರಿ ಇಂಚಿತಾ 9ನೇ ತರಗತಿ, ಹಾಗೂ ಉಪ ನಾಯಕನಾಗಿ 8 ನೇ ತರಗತಿಯ ಹೃತಿಕ್ ಆಯ್ಕೆಯಾಗಿರುತ್ತಾರೆ. ಸಾರ್ವತ್ರಿಕ ಮತದಾನದಲ್ಲಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಯ ಅರಿವು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ, ಪೂರ್ತಿ ಮತದಾನವನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ನಡೆಸಲಾಗಿತ್ತು.

ಶಾಲಾ ನಾಯಕ/ ಉಪನಾಯಕ ಮಾತ್ರವಲ್ಲದೆ ಉಳಿದ ಸ್ಥಾನಗಳಿಗೂ ಚುನಾವಣೆ ನಡೆಸಲಾಗಿದ್ದು ಕೃಷಿಮಂತ್ರಿಯಾಗಿ 9ನೇ ತರಗತಿಯ ಧನುಷ್,ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಪ್ರಮಿತ್, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ 9ನೇ ತರಗತಿಯ ಅಪೇಕ್ಷಾ, ಆಹಾರ ಮಂತ್ರಿಯಾಗಿ 9ನೇ ತರಗತಿಯ ಫಾತಿಮತ್ ರಾಫಿಯಾ, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿಯಾಗಿ 9ನೇ ತರಗತಿ ಮನೀಷ್, ಶಿಕ್ಷಣ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಧನ್ಯಶ್ರೀ ಹಾಗೂ ಗೃಹ ಮಂತ್ರಿಯಾಗಿ 9 ನೇ ತರಗತಿ ಅಕ್ಷತ್ ಚುನಾವಣೆಯ ಮೂಲಕ ಆಯ್ಕೆಗೊಂಡರು. ಸಮಾಜ ವಿಜ್ಞಾನ ಶಿಕ್ಷಕ ಶಿವಪುತ್ರ ಸುಣಗಾರ ಚುನಾವಣಾಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು.

Related posts

ನಾಲ್ಕೂರು: ರಾಮನಗರದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯಿಂದ ರಕ್ಷಾಬಂಧನ ಕಾರ್ಯಕ್ರಮ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದಿಂದ ಅಗ್ನಿ ಸುರಕ್ಷತೆ, ಆರೋಗ್ಯ ಸುರಕ್ಷತೆ, ಹಾಗೂ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ತರಬೇತಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿಗೆ ಶೇ.96.15 ಫಲಿತಾಂಶ

Suddi Udaya

ಬೆಳ್ತಂಗಡಿ ಜೆಸಿಐ ಮಂಜುಶ್ರೀ ಮಹಿಳಾ ವಿಭಾಗದಿಂದ ಮೆಡಿಕಲ್ ಕ್ಯಾಂಪ್

Suddi Udaya

ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಪ್ರಾಪ್ತಿ ವಿ.ಶೆಟ್ಟಿ ಡಿಸ್ಟಿಂಕ್ಷನ್

Suddi Udaya
error: Content is protected !!