37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

ಬೆಳ್ತಂಗಡಿ :ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದರುನಲ್ಲಿರುವ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಆನ್ ಬ್ಯಾಟರಿ ಅಂಗಡಿಯೊಂದಕ್ಕೆ ಕನ್ನ ಹಾಕಿದ ಕಳ್ಳರು ಶಟರ್ ಒಡೆದು ಒಳಗೆ ಹೋಗಲು ಪ್ರಯತ್ನ ಮಾಡಿದ್ದಾರೆ.

ಶೀತಲ್ ಜೈನ್ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಕಳ್ಳರು ತಡರಾತ್ರಿ ಕೈಚಳಕ ತೋರಿದ್ದಾರೆ. ಅಂಗಡಿಯ ಒಂದು ಶಟರ್ ಒಡೆದು ಹಾಕಿದ್ದಾರೆ. ಒಳಗೆ ಹೋಗಲು ಗ್ಲಾಸ್ ಇದ್ದುದರಿಂದ ಸಾಧ್ಯವಾಗಿಲ್ಲ. ಇನ್ನೊಂದು ಶಟರ್ ಒಡೆಯಲು ಪ್ರಯತ್ನ ಪಟ್ಟು ವಿಫಲರಾಗಿದ್ದಾರೆ.

ಶನಿವಾರ ಬೆಳಿಗ್ಗೆ ಎಂದಿನಂತೆ ಅಂಗಡಿ ತೆರೆಯಲು ಬಂದಾಗ ಮಾಲೀಕರಿಗೆ ಕಳ್ಳತನಕ್ಕೆ ಪ್ರಯತ್ನ ಪಟ್ಟಿದ್ದು ಗೊತ್ತಾಗಿದೆ. ಒಳಗೆ ಹೋಗಲು ಸಾಧ್ಯವಾಗದಿದ್ದುದರಿಂದ ಯಾವುದೇ ಸ್ವತ್ತು ಕಳವಾಗಿಲ್ಲ ಎಂದು ಸಂಸ್ಥೆಯ ಮಾಲಕ ಶೀತಲ್ ಜೈನ್ ಸುದ್ದಿ ಉದಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಇಗಾಗಲೇ ಬೆಳ್ತಂಗಡಿ ಪೋಲೀಸರಿಗೆ ಮಾಹಿತಿ ನೀಡಲಾಗಿದೆ.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

Suddi Udaya

ನಿಡ್ಲೆ : ಸ. ಪ್ರೌ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಅನ್ವೇಷಣಾ ಸ್ಪರ್ಧೆ: ಎಸ್‌ಡಿಎಂ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

Suddi Udaya

ಗುರುವಾಯನಕೆರೆ ವಿದ್ವತ್ ಪಿ.ಯು ಕಾಲೇಜಿನಲ್ಲಿ “ ಕಾರ್ಗಿಲ್ ವಿಜಯ್ ದಿವಸ್ ”ಆಚರಣೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಸುತ್ತಿನ ವಾರ್ಡ್ ಸಭೆ

Suddi Udaya

ಕಾಂಗ್ರೆಸ್ ಪಕ್ಷದಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜ್ಯಾರಿಗಾಗಿ ಬ್ಲಾಕ್, ಗ್ರಾಮ ಮಟ್ಟದಲ್ಲಿ ತರಬೇತಿ: ಇಂದಿರಾ ಸೇವಾ ಸೆಂಟರ್ ಗಳನ್ನು ತೆರೆದು ಫಲಾನುಭವಿಗಳಿಗೆ ಅರ್ಜಿ ನೊಂದಣಿ

Suddi Udaya
error: Content is protected !!