September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ವಿದ್ವತ್ ಪಿ.ಯು ಕಾಲೇಜಿನಲ್ಲಿ “ ಕಾರ್ಗಿಲ್ ವಿಜಯ್ ದಿವಸ್ ”ಆಚರಣೆ


ಗುರುವಾಯನಕೆರೆ: ಶೈಕ್ಷಣಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿರುವ ವಿದ್ವತ್ ಪಿ.ಯು
ಕಾಲೇಜಿನಲ್ಲಿ “ ಕಾರ್ಗಿಲ್ ವಿಜಯ್ ದಿವಸ್ ” ವನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.


ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ.ಇ. ಮಂಡಗಳಲೆ ಮಾತನಾಡಿ, 1999 ರ ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಸೈನಿಕರ ಶೌರ್ಯವನ್ನು ಗೌರವಿಸಲು ಜು.26 ರಂದು ದೇಶದಾದ್ಯಂತ “ ಕಾರ್ಗಿಲ್ ವಿಜಯ್ ದಿವಸ್ ” ವನ್ನು ಆಚರಿಸಲಾಗುತ್ತದೆ. ಈ ದಿನವು ಸಂಘರ್ಷದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ವಿಜಯ ಮತ್ತು ಅಪರೇಷನ್ ವಿಜಯ್ ನ ಯಶಸ್ವಿ ಸಮಾಪ್ತಿಗೆ 26 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಸುಮಾರು 60 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧ ಈ ದಿನದಂದು ಕೊನೆಗೊಂಡಿತು. ಭಾರತೀಯ ರಕ್ಷಣಾ ಪಡೆಗಳು ಪಾಕಿಸ್ತಾನ ಸೈನ್ಯಕ್ಕೆ ಸೂಕ್ತ ಉತ್ತರ ನೀಡಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಂಭ್ರಮಿಸಿದ ದಿನವಾಗಿದೆ ಎಂದು ತಿಳಿಸಿದರು.

ನಂತರ ವಿದ್ಯಾರ್ಥಿಗಳಿಗೆ ಕಾರ್ಗಿಲ್ ನಲ್ಲಿ ಯೋಧರು ಹೋರಾಡಿದ ವೀಡಿಯೋ ದೃಶ್ಯಗಳನ್ನು, ಯೋಧರು ಸಂಭ್ರಮಿಸಿದ
ಕ್ಷಣಗಳ ವೀಡಿಯೋಗಳನ್ನು, ಮತ್ತು ದೇಶಭಕ್ತಿಗೀತೆಗಳ ವೀಡಿಯೋಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾಲೇಜಿನ ಆಡಳಿತಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ,
ಪ್ರಾಂಶುಪಾಲರಾದ ಹರೀಶ್ ಕೆ.ಆರ್, ಉಪಸ್ಥಿತರಿದ್ದರು.

ಕಾಲೇಜಿನ ಕನ್ನಡ ಉಪನ್ಯಾಸಕ ನೀಲಕಂಠ ಸ್ವಾಗತಿಸಿದರು.

Related posts

ಎ.ಆರ್.ಎಂ ಕಿಯಾ ಆರು ವರ್ಷದ ಯಶಸ್ಸು: 9,000ನೇ ಕಾರು ವಿತರಣೆ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನಿಂದ ರೂ. 1ಲಕ್ಷ ದೇಣಿಗೆ

Suddi Udaya

ಜ.25: ಧರ್ಮಸ್ಥಳದಲ್ಲಿ ಶ್ರೀ ಶಿವಶಕ್ತಿ ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya

ಶಿಶಿಲ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿತ; ಮಹಿಳೆ ಸಾವು

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾ ಕಚೇರಿಯಲ್ಲಿ ನೀರು ಉಳಿಸಿ ಭವಿಷ್ಯದ ನೀರು-ಇಂದಿನ ಕಾಳಜಿ ಕರಪತ್ರ ಬಿಡುಗಡೆ

Suddi Udaya
error: Content is protected !!