ಹಿರಿಯ ಸಾಹಿತಿ ಎನ್ ಜಿ ಪಟವರ್ಧನ್ ಅವರ ಕೃತಿ ‘ಆಟ’ ಲೋಕಾರ್ಪಣೆ

Suddi Udaya

ಉಜಿರೆ: ಪ್ರಖ್ಯಾತ ಹಿರಿಯ ಸಾಹಿತಿ ಪ್ರೊಫೆಸರ್ ಎನ್. ಜಿ ಪಟವರ್ಧನ್ ಅವರ ಕಾದಂಬರಿ ‘ಆಟ’ ಇದನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಡಾ. ಬಿ ಎ ಕುಮಾರ್ ಹೆಗ್ಡೆ ಅವರು ಲೋಕಾರ್ಪಣೆಗೊಳಿಸಿದರು.
ಕ್ರಿಕೆಟ್ ಜಗತ್ತಿನ ಸಂಗತಿಗಳನ್ನು ಬಳಸಿಕೊಂಡು ಬದುಕಿನ ಆಟವನ್ನು ಕಥನವನ್ನಾಗಿ ಪ್ರಯೋಗ ಮಾಡಿರುವ ಈ ಕಾದಂಬರಿಯಲ್ಲಿ ಪ್ರೊ. ಎನ್ ಜಿ ಪಟವರ್ಧನ್ ಅವರ ಉತ್ಸಾಹ ಮತ್ತು ಸೃಜನಶೀಲತೆಯ ಅಭಿವ್ಯಕ್ತಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಪ್ರಾಂಶುಪಾಲರು ಅನಿಸಿಕೆ ವ್ಯಕ್ತಪಡಿಸಿದರು.


ತಾವು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಾಲೇಜಿನ ಈ ಕೃತಿ ಬಿಡುಗಡೆಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರೊ. ಎನ್. ಜಿ ಪಟವರ್ಧನ್ ಅವರು ಕ್ರಿಕೆಟ್ ನೊಂದಿಗೆ ತಮ್ಮ ಒಡನಾಟ ಮತ್ತು ಅದರ ಅನುಭವ ಮುಖೇನ ಕಾದಂಬರಿಯನ್ನು ವಿರಚಿಸಿದ ರೀತಿಯನ್ನು ವಿವರಿಸಿ ಕೃತಿ ಅನಾವರಣಗೊಳಿಸಲು ಅವಕಾಶ ನೀಡಿದ್ದಕ್ಕಾಗಿ ಕಾಲೇಜಿಗೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷರಾದ ಡಾ| ಎಂಪಿ ಶ್ರೀನಾಥ್ ಅವರು ನಿರೂಪಿಸಿ , ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಡಾ. ಕಿಶೋರ್ ಪಟವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ದಿವ ಕೊಕ್ಕಡ ವಂದಿಸಿದರು.
ಪಟವರ್ಧನ್ ಅವರ ಕುಟುಂಬ ಸದಸ್ಯರು , ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Comment

error: Content is protected !!