ಧರ್ಮಸ್ಥಳ : ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ, ಧರ್ಮಸ್ಥಳ ಇಲ್ಲಿನ 2023- 24 ನೇ ಸಾಲಿನ ವಿದ್ಯಾರ್ಥಿ ಸರಕಾರದ ರಚನೆಗಾಗಿ ಪ್ರಜಾಪ್ರಭುತ್ವದ ಚುನಾವಣಾ ಮಾದರಿಯಲ್ಲಿ ಚುನಾವಣೆಯನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಮಾದರಿಯಲ್ಲಿ ನಡೆಸಲಾಯಿತು.
ಚುನಾವಣೆಯ ಅಧಿಸೂಚನೆಯ ಮೂಲಕ ಆರಂಭವಾದ ಪ್ರಕ್ರಿಯೆಯು ಠೇವಣಿಯೊಂದಿಗೆ ನಾಮಪತ್ರ ಸಲ್ಲಿಸುವಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚುನಾವಣಾ ಮತ್ತು ಪ್ರಚಾರ ನಡೆದು, ಚುನಾವಣಾ ದಿನ ಶಿಸ್ತು ಬದ್ಧರಾಗಿ ವಿದ್ಯಾರ್ಥಿಗಳು ತಮ್ಮ ಹಾಜರಾತಿಯ ಪ್ರಕಾರ, ತಮ್ಮ ಗುರುತನ್ನು ತಿಳಿಸಿ, ಸರತಿಯ ಸಾಲಿನಲ್ಲಿ ಬಂದು ಮತವನ್ನು ಚಲಾಯಿಸಿದರು.
ಸಾರ್ವತ್ರಿಕ ಚುನಾವಣೆ ಮಾದರಿಯಂತೆ ನಡೆದ ಈ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಮಾದರಿಯ ಆಪ್ ಮೂಲಕ ವಿದ್ಯಾರ್ಥಿಗಳು ಮತವನ್ನು ಚಲಾಯಿಸಿದರು.
ಶಾಲಾ ನಾಯಕನಾಗಿ ಜ್ಞಾನೇಶ್, ಶಾಲಾ ಉಪ ನಾಯಕನಾಗಿ ಪ್ರಜ್ವಲ್, ಶಾಲಾ ಉಪೋಪನಾಯಕನಾಗಿ ಪ್ರತೀಕ್ ಆಯ್ಕೆಯಾಗಿ, ಚುನಾವಣಾ ಫಲಿತಾಂಶದ ಘೋಷಣೆಯನ್ನು ಮಾಡಿ, ವಿಜೇತರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಪದ್ಮರಾಜ್ ಹಾಗೂ ಹಿರಿಯ ಶಿಕ್ಷಕ ಜಯರಾಮ ಮಯ್ಯ ಇವರ ಮಾರ್ಗದರ್ಶನದಲ್ಲಿ ಶಿಕ್ಷಕ ಯುವರಾಜ್ ಹಾಗೂ ವಿಕಾಸ್ ಆರಿಗಾ ಇವರ ನಿರ್ದೇಶನದಲ್ಲಿ ಎಲ್ಲಾ ಅಧ್ಯಾಪಕರ ಸಹಕಾರದೊಂದಿಗೆ ಮಾದರಿ ಚುನಾವಣಾ ಚಟುವಟಿಕೆಯು ಯಶಸ್ವಿಯಾಗಿ ಜರುಗಿತು.