ಮಲವಂತಿಗೆ: ಪ್ರತಿ ವರ್ಷದಂತೆ ಈ ವರ್ಷವೂ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಸ.ಹಿ.ಪ್ರಾ.ಶಾಲೆ ಕಜಕೆ 1ರಿಂದ7 ನೇ ತರಗತಿ ಮಕ್ಕಳಿಗೆ ಬರೆಯುವ ( ನೋಟ್) ಪುಸ್ತಕಗಳನ್ನು ಬೆಳ್ತಂಗಡಿಯ ನೋಟರಿ ವಕೀಲರಾದ ಮುರಳಿ. ಬಿ. ಇವರು ಹಾಗೂ ಇವರ ಕುಟುಂಬದವರು ಜೂನ್.10ರಂದು ಶಾಲೆಗೆ ಆಗಮಿಸಿ ಉಚಿತವಾಗಿ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುರಳಿ.ಬಿ. ಅವರ ಧರ್ಮಪತ್ನಿ ಶ್ರೀಮತಿ ಮನೋರಮ, ಪುತ್ರರಾದ ಮಯೂರ್ ಹಾಗೂ ಮಂದಾರ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶೇಖರ ಗೌಡ ಕಜಕೆ, ಸಮಿತಿಯ ಸದಸ್ಯರಾದ ವೆಂಕಟೇಶ್ ಪ್ರಸಾದ್, ಸ್ಥಳೀಯರಾದ ವಸಂತ ಲೋಂಡೆ ಗುರಿಗದ್ದೆ ಇವರೆಲ್ಲರೂ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆ ನಂತರ ಶಾಲಾ ಸಹ ಶಿಕ್ಷಕರಾದ ರಂಗನಾಥ ಬಿ.ಕೆ. ಎಲ್ಲರನ್ನು ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ ಕೆ.ಎನ್. ವಂದಿಸಿದರು. ಶಾಲಾ ಸಹ ಶಿಕ್ಷಕರಾದ ಮಂಜುನಾಥ ಕಾರ್ಯಕ್ರಮವನ್ನು ನಿರೂಪಿಸಿ ಗೌರವ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.