23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಶಾಲಾ ಕಾಲೇಜು

ಕಜಕೆ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ

ಮಲವಂತಿಗೆ: ಪ್ರತಿ ವರ್ಷದಂತೆ ಈ ವರ್ಷವೂ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಸ.ಹಿ.ಪ್ರಾ.ಶಾಲೆ ಕಜಕೆ 1ರಿಂದ7 ನೇ ತರಗತಿ ಮಕ್ಕಳಿಗೆ ಬರೆಯುವ ( ನೋಟ್) ಪುಸ್ತಕಗಳನ್ನು ಬೆಳ್ತಂಗಡಿಯ ನೋಟರಿ ವಕೀಲರಾದ ಮುರಳಿ. ಬಿ. ಇವರು ಹಾಗೂ ಇವರ ಕುಟುಂಬದವರು ಜೂನ್.10ರಂದು ಶಾಲೆಗೆ ಆಗಮಿಸಿ ಉಚಿತವಾಗಿ ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುರಳಿ.ಬಿ. ಅವರ ಧರ್ಮಪತ್ನಿ ಶ್ರೀಮತಿ ಮನೋರಮ, ಪುತ್ರರಾದ ಮಯೂರ್ ಹಾಗೂ ಮಂದಾರ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶೇಖರ ಗೌಡ ಕಜಕೆ, ಸಮಿತಿಯ ಸದಸ್ಯರಾದ ವೆಂಕಟೇಶ್ ಪ್ರಸಾದ್, ಸ್ಥಳೀಯರಾದ ವಸಂತ ಲೋಂಡೆ ಗುರಿಗದ್ದೆ ಇವರೆಲ್ಲರೂ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆ ನಂತರ ಶಾಲಾ ಸಹ ಶಿಕ್ಷಕರಾದ ರಂಗನಾಥ ಬಿ.ಕೆ. ಎಲ್ಲರನ್ನು ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ ಕೆ.ಎನ್. ವಂದಿಸಿದರು. ಶಾಲಾ ಸಹ ಶಿಕ್ಷಕರಾದ ಮಂಜುನಾಥ ಕಾರ್ಯಕ್ರಮವನ್ನು ನಿರೂಪಿಸಿ ಗೌರವ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ಇಳಂತಿಲ ಗ್ರಾ.ಪಂ. ನಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya

ನಾಲ್ಕೂರು: ತೋಟದಪಲ್ಕೆ ನಿವಾಸಿ ಭಾನುಮತಿ ನಿಧನ

Suddi Udaya

ಅಕ್ರಮ ಸಕ್ರಮ ಭೂ ಮಂಜೂರಾತಿ ಆ್ಯಪ್ ನಲ್ಲಿ ಇರುವ ತೊಡಕನ್ನು ಬದಲಾಯಿಸುವಂತೆ ಆಗ್ರಹಿಸಿ ಕೃಷಿಕರಿಂದ ಸಚಿವ ಕೃಷ್ಣ ಬೈರೆ ಗೌಡರಿಗೆ ಪತ್ರ ಚಳುವಳಿ ಮೂಲಕ ಮನವಿ

Suddi Udaya

ಪವಿತ್ರ ಹೃದಯ ಭಗೀನಿಯರ ಸಭೆ: ಬೆಳ್ತಂಗಡಿ ಧರ್ಮ ಪ್ರಾಂತ್ಯವಲಯಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ

Suddi Udaya

ಕೊಕ್ಕಡದ‌ಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರವರ ಕಾರನ್ನು ಚುನಾವಣಾ ಅಧಿಕಾರಿಗಳಿಂದ ತಪಾಸಣೆ

Suddi Udaya

ಗಂಡಿಬಾಗಿಲು ಸೆಂಟ್ ತೋಮಸ್ ಚರ್ಚ್ ನಲ್ಲಿ ಪಾಲಕರ ದಿನಾಚರಣೆ

Suddi Udaya
error: Content is protected !!