ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಲ ಮೂಲ ಶುಚಿತ್ವ ಹಾಗೂ ಹಣ್ಣು ಹಂಪಲು ಗಿಡಗಳ ವಿತರಣಾ ಕಾರ್ಯಕ್ರಮ

ಮಡಂತ್ಯಾರು : ಗ್ರಾಮ ಪಂಚಾಯತ್ ಮಡಂತ್ಯಾರು ಇದರ ವತಿಯಿಂದ ಜೆಸಿಐ ಮಡಂತ್ಯಾರು, ಸೇಕ್ರೆಡ್ ಹಾರ್ಟ್ ಕಾಲೇಜ್ ಎನ್.ಎಸ್.ಎಸ್. ಘಟಕ ಮತ್ತು ಎನ್.ಸಿ.ಸಿ. ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ವಿಪತ್ತು ನಿರ್ವಹಣಾ ತಂಡ ಮಡಂತ್ಯಾರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಜಲಮೂಲ ಶುಚಿತ್ವ ಮತ್ತು ಹಣ್ಣು ಹಂಪಲು ಗಿಡ ವಿತರಣಾ ಕಾರ್ಯಕ್ರಮವು ಗ್ರಾಮ ಪಂಚಾಯಿತಿ ಮಡಂತ್ಯಾರು ಪೆದ್ಯಾರಿನಲ್ಲಿ ಜೂ 10 ರಂದು ನಡೆಯಿತು.


ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ, ಉಪಾಧ್ಯಕ್ಷೆ ಶ್ರೀಮತಿ ಸಂಗೀತಾ ಶೆಟ್ಟಿ, ಪಂಚಾಯತ್ ಸದಸ್ಯ ವಿಶ್ವನಾಥ್ ಪೂಜಾರಿ, ಶ್ರೀಮತಿ ಮೋಹಿನಿ, ಕಿಶೋರ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಜೆಸಿಐ ಮಡಂತ್ಯಾರು ಘಟಕದ ಪೂರ್ವಾಧ್ಯಕ್ಷರು, ವಲಯ 15ರ ಗೋಗ್ರಿನ್ ವಿಭಾಗದ ನಿರ್ದೇಶಕರಾದ ಜೇಸಿ ನವೀನ್ ಕೊಡ್ಲಕ್ಕೆ, ಘಟಕಾಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯ, ಜೆಸಿಐ ಮಡಂತ್ಯಾರು ಘಟಕದ ನಿಕಟ ಪೂರ್ವಾಧ್ಯಕ್ಷರು, ವಲಯ ಉಪಾಧ್ಯಕ್ಷರಾದ ಜೇಸಿ ಭರತ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಜೇಸಿ ಸಂಯುಕ್ತ ಕರ್ತಿಲ, ಎನ್ಎಸ್ಎಸ್ ಮಡಂತ್ಯಾರು ಘಟಕದ ಮುಖ್ಯಸ್ಥರಾದ ಪ್ರಶಾಂತ್, ಎನ್.ಸಿ.ಸಿ ಮಡಂತ್ಯಾರು ಘಟಕದ ಮುಖ್ಯಸ್ಥರಾದ ಲೆಫ್ಟಿನೆಟ್ ಆಲ್ವಿನ್ ಕೆ.ಜಿ ಹಾಗೂ ಪುಂಜಾಲಕಟ್ಟೆ ಘಟಕದ ಮುಖ್ಯಸ್ಥರಾದ ಸಂತೋಷ್, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಜೇಸಿ ಸದಸ್ಯರು ಮಡಂತ್ಯಾರು ಮತ್ತು ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜಲಾನಯನ ಮಹೋತ್ಸವ ಅಭಿಯಾನ

Suddi Udaya

ಕಳೆoಜ ಗ್ರಾಮಸ್ಥರ ಮನವಿಗೆ ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ : ಕುದ್ರಾಯ ಕಕ್ಕಿಂಜೆ ಮುಖ್ಯ ರಸ್ತೆಯ ಮರಕ್ಕಡದಿಂದ ಮಿಯ್ಯಾರು ತನಕ ರಸ್ತೆ ಕಾಮಗಾರಿಗೆ ಚಾಲನೆ

Suddi Udaya

ಬೆಳ್ತಂಗಡಿ ತಾಲೂಕಿನ ಇಬ್ಬರು ಸಾಧಕರು ಹಾಗೂ ಎರಡು ಸೇವಾ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಹತ್ಯಡ್ಕ : ಶ್ರೀ ವಿಠೋಬ ರಕುಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರಿಂದ ರೂ.5 ಲಕ್ಷ ದೇಣಿಗೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಮಂಗಲೋತ್ಸವ ಹಾಗೂ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕಾಂಗ್ರೆಸ್ ಕರಪತ್ರದಲ್ಲಿ ಯಕ್ಷಗಾನ ವೇಷಧಾರಿಯ ಫೋಟೋ ಬಳಕೆ: ಜಿಲ್ಲಾ ಚುನಾವಣಾಧಿಕಾರಿಗೆ ದೂರು ದಾಖಲು

Suddi Udaya
error: Content is protected !!