April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಕಾಮ್‍ಸ್ಕೋಪ್ ಇವರ ಸಿಎಸ್ಆರ್ ನಿಧಿಯ ಪ್ರಾಯೋಜಕತ್ವದಲ್ಲಿ ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್ ವಿತರಣೆ

ಬಳಂಜ :ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್(ರಿ) ಪುತ್ತೂರು ಹಾಗೂ ಕಾಮ್‍ಸ್ಕೋಪ್ ಇವರ ಸಿಎಸ್ಆರ್ ನಿಧಿಯ ಪ್ರಯೋಜಕತ್ವದಲ್ಲಿ ಬಳಂಜ ಸರಕಾರಿ ಪ್ರೌಢಶಾಲೆಯ 8,9,10ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ನೋಟ್‍ ಪುಸ್ತಕ, ಬ್ಯಾಗ್ ಮತ್ತು ಜಾಮೆಟ್ರಿ ಬಾಕ್ಸ್ಗಳ ವಿತರಣೆಯನ್ನು ಜೂ.12 ರಂದು ನೆರವೇರಿಸಲಾಯಿತು.

ಒಟ್ಟು 61 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದು,

ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ SDMC ಸದಸ್ಯ ಉಸ್ಮಾನ್, ಬಳಂಜ ಗ್ರಾ.ಪಂ ಪಿಡಿಒ ಶ್ರೀನಿವಾಸ್‍ ಭಾಗವಹಿಸಿದ್ದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಸ್ಥಳೀಯ ಬಳಂಜ ನಿವಾಸಿಗಳಾದ ಸುಕೇಶ್ ಪೂಜಾರಿ ಮತ್ತು ಶ್ರೀಮತಿ ಕವಿತಾ ಸುಕೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಸತ್ಯವತಿ ಎಂ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶ್ರೀಮತಿ ವೀಣಾ ವಂದಿಸಿದರು.

.ಶಾಲಾ ಶಿಕ್ಷಕರಾದ ಗಣೇಶ್ ಮತ್ತು ಶ್ರೀಮತಿ ಸುಕನ್ಯರವರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Related posts

ಅಳದಂಗಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸರಸ್ವತಿ, ಉಪಾಧ್ಯಕ್ಷರಾಗಿ ಶಾಲಿನಿ ಅವಿರೋಧವಾಗಿ ಆಯ್ಕೆ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಉರುವಾಲುವಿನ ಸೀತಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಚಾರ್ಮಾಡಿ ಹೊಸಮಠ ಪ್ರದೇಶದಲ್ಲಿ ಹಿಂದೂ ಮಲಯಾಳಿ ಕೇರಳ ಓಣಂ ಆಚರಣೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ, ಓಣಂ ವಿಶೇಷ ಪೋಕಳಂ ಭೋಜನ ಕೂಟ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಬೆಳಾಲು ಶ್ರೀ ಧ.ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ: 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!