39.6 C
ಪುತ್ತೂರು, ಬೆಳ್ತಂಗಡಿ
April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಲಯನ್ಸ್ ಜಿಲ್ಲೆ 317ಡಿ ಕೃತಜ್ಞಾ ಪ್ರಶಸ್ತಿ ಪ್ರಧಾನ ಸಮಾರಂಭ: ವಸಂತ್ ಶೆಟ್ಟಿ ಶ್ರದ್ದಾರವರಿಗೆ ಅತ್ಯುತ್ತಮ ಪ್ರಾಂತೀಯ ಅಧ್ಯಕ್ಷ ಪ್ರಶಸ್ತಿ

ಬೆಳ್ತಂಗಡಿ : ಸಕಲೇಶಪುರದಲ್ಲಿ ಜರಗಿದ ಲಯನ್ಸ್ ಜಿಲ್ಲೆ 317ಡಿ ಕೃತಜ್ಞಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಾಂತ್ಯ 5ರ ಪ್ರಾಂತ್ಯ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ದಾ 2022-2023ನೇ ಸಾಲಿನ ಅತ್ಯುತ್ತಮ ಪ್ರಾಂತ್ಯ ಅಧ್ಯಕ್ಷರಾಗಿ ಮೂಡಿ ಬಂದಿದ್ದಾರೆ. ಇವರ ಸೇವಾವಧಿಯಲ್ಲಿ ಲಯನ್ಸ್ ಜಿಲ್ಲೆಗೆ ಪ್ರಾಂತ್ಯದಿಂದ 20 ಎಂ. ಜೆ. ಎಫ್,. ನೂತನ ಕ್ಲಬ್ ಬಪ್ಪನಾಡು ಇನ್ಸ್ಪೈರ್, ಪ್ರಾಂತ್ಯದ ಕ್ಲಬ್ ಗಳು ಹಲವು ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.

ಬಂಗಾಡಿ ಪ್ರೌಢ ಶಾಲೆಗೆ ಸ್ಮಾರ್ಟ್ ತರಗತಿ ಕೊಡುಗೆ, ಪ್ರಾಂತೀಯ ಸಮ್ಮೇಳನದ ಆಯೋಜನೆ ಯಶಸ್ವಿಯಾಗಿ ನಡೆದಿದೆ. ಸಕಲೇಶಪುರದಲ್ಲಿ ಜಿಲ್ಲಾ ರಾಜ್ಯಪಾಲ ಸಂಜಿತ್ ಶೆಟ್ಟಿ ನೇತೃತ್ವದಲ್ಲಿ ಜರಗಿದ ಕೃತಜ್ಞಾ ಸಮ್ಮೇಳನದಲ್ಲಿ ಬೆಳ್ತಂಗಡಿ ಅಧ್ಯಕ್ಷ ದೇವಿಪ್ರಸಾದ್ ಬೊಲ್ಮ, ಕೋಶಾಧಿಕಾರಿ ಪಂಚಾಕ್ಷರಪ್ಪ, ಪೂರ್ವಾಧ್ಯಕ್ಷರುಗಳಾದ ರಾಮಕೃಷ್ಣ ಗೌಡ, ಧರನೇಂದ್ರ ಕೆ. ಜೈನ್, ರವೀಂದ್ರ ಶೆಟ್ಟಿ, ಸದಸ್ಯರುಗಳಾದ ದತ್ತಾತ್ರಯ, ಅಶ್ರಫ್ ಆಲಿ ಕುಂಝಿ, ಪ್ರಭಾಕರ ಗೌಡ ಬೊಲ್ಮ ಮುಂತಾದವರು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ: ಮುಂಡಾಜೆ ಬ್ರಿಟಿಷರ ಕಾಲದ ಹಳೆ ಸೇತುವೆ ತೆರವು ಕಾರ್ಯಾಚರಣೆ ಆರಂಭ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರ ಪತ್ತೆಯಾಗಿ ಪೊಲೀಸರ ಮನವಿ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಐಸಿವೈಎಮ್ ಘಟಕದ ಕ್ರಿಸ್ಮಸ್ ಟ್ಯಾಬ್ಲೊ

Suddi Udaya

ಬೆಳ್ತಂಗಡಿ: ನಿವೃತ್ತ ಶಿಕ್ಷಕಿ ಮೇರಿ ಗ್ರೇಸ್ ಮೋರಿಸ್ ನಿಧನ

Suddi Udaya

ಮುಂಡಾಜೆ ಚಿತ್ಪಾವನ ಸಂಘಟನೆ ವಾರ್ಷಿಕೋತ್ಸವ

Suddi Udaya

ಅ.17: ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಇದರ ನೇತೃತ್ವದಲ್ಲಿ ಅಂಗಾಂಗ ದಾನ ನೊಂದಣಿ

Suddi Udaya
error: Content is protected !!