April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

ಶಿಶಿಲ: ಜೂ. 11 ರಂದು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣದಿಂದ ಸಂಪನ್ನಗೊಂಡ ಶ್ರೀ ಸಿದ್ದ ಭಗವಂತರು ವಿರಾಜಮಾನರಾದ ಈ ಸಂದರ್ಭದಲ್ಲಿ ಬಿಂಬವನ್ನು ತರುವಲ್ಲಿ ಸಹಕರಿಸಿದ ಅಜಿತ್ ರವರನ್ನು ಆಡಳಿತ ಮಂಡಳಿ ಹಾಗೂ ದಾನಿಗಳಾದ ಉಜಿರೆಯ ಎಸ್. ಡಿ ಶೆಟ್ಟಿ ದಂಪತಿಗಳು ಗೌರವಿಸಿದರು. ‌

ಪಡಂಗಡಿ ಜಿನೇಂದ್ರ ಭಂಗ , ಉಜಿರೆಯ ನಾಗರಾಜ ಪೂವಣಿ ಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಧನಕೀರ್ತಿ ಶೆಟ್ಟಿ ಧರ್ಮಸ್ಥಳ, ಯಶೋಧರ ಶೆಟ್ಟಿ ಸಮೃಧಿ, ರವಿರಾಜ ಶೆಟ್ಟಿ ಕುಂಡೊವು, ಆಡಳಿತ ಮಂಡಳಿ ಅಧ್ಯಕ್ಷರಾದ ವಿಜಯಕುಮಾರ್, ಕಾರ್ಯಾಧ್ಯಕ್ಷರಾದ ಚಿತ್ತರಂಜನ್, ಉಪಾಧ್ಯಕ್ಷರಾದ ಜಿನರಾಜ ಪೂವಣಿ, ಕೋಶಾಧಿಕಾರಿ ಪಣಿರಾಜ್ ಜೈನ್, ವೀರೇಂದ್ರ ಕುಮಾರ್ ವಳಂಬಲ, ಸಂತೋಷ್ ಕುಮಾರ್ ವಳಂಬಲ, ಉಜಿರೆಯ ನಾಭಿರಾಜ ಪೂವಣಿ, ರಾಣಿ ಶಿಶುಗಲಿ ಜೈನ ಮಹಿಳಾ ಸಮಾಜದ ಅಧ್ಯಕ್ಷ ಶ್ರೀಮತಿ ನಾಗಕನ್ನಿಕ, ಶ್ರೀಮತಿ ಶಶಿಪ್ರಭ ಶ್ರೀಮತಿ ಸುಗುಣ ಶೆಟ್ಟಿ, ಶ್ರೀಮತಿ ಶಕುಂತಲಾ ಜೈನ್ ಶ್ರೀಮತಿ ಸುರಭಿ, ಶ್ರೀಮತಿ ಜಯಶ್ರೀ, ಶ್ರೀಮತಿ ಸರೋಜಾ ಮೊದಲಾದವರು ಉಪಸ್ಥಿತರಿದ್ದರು.

ಭೋಜನದ ವ್ಯವಸ್ಥೆಯನ್ನು ಶ್ರೀಮತಿ ಸುರಭಿ ಜಯಕುಮಾರ್ ಕಲ್ಲುಗುಡ್ಡೆ ಮಾಡಿದರು. ಕಾರ್ಯಕ್ರಮವನ್ನು ಡಾ.ಜಯಕೀರ್ತಿ ಜೈನ್ ನಿರ್ವಹಣೆ ಮಾಡಿದರು

Related posts

ಕ್ಯಾನ್ಸರ್ ಪೀಡಿತರಿಗೆ ಕೇಶದಾನಗೈದು ಮಾದರಿಯಾದ ಶಿರ್ಲಾಲುವಿನ ರಾಜಶ್ರೀ ಜಗದೀಶ್

Suddi Udaya

ಕಾಜೂರು: ರೂ. 1.5 ಕೋಟಿ ವೆಚ್ಚದ “ಮುಸಾಫಿರ್ ಖಾನಾ (ಯಾತ್ರಿ ನಿವಾಸ)” ಕಟ್ಟಡ ಉದ್ಘಾಟನೆ:

Suddi Udaya

ಕಳೆಂಜ ರಾಜೇಶ್ ಎಂ.ಕೆ ರವರ ಪೋಕ್ಸೋ ಪ್ರಕರಣ: ಅಪ್ರಾಪ್ತ ವಯಸ್ಕಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಕಾನೂನು ವ್ಯವಸ್ಥೆಯ ದುರ್ಬಳಕೆ ಮಾಡಿದ ಬಗ್ಗೆ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಳೆಂಜ ಗ್ರಾಮಸ್ಥರಿಂದ ಮನವಿ

Suddi Udaya

ಒಕ್ಕಲಿಗರ ಕ್ರಿಕೆಟ್ ಪಂದ್ಯಾಟ: ಪಟ್ರಮೆ ಬ್ರದರ್ಸ್ ತಂಡ ದ್ವಿತೀಯ ಸ್ಥಾನ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಿಂದ ವೈದ್ಯಕೀಯ ಚಿಕಿತ್ಸಾ ನೆರವು

Suddi Udaya

ನಾವೂರು ಗ್ರಾ.ಪಂ. ನಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya
error: Content is protected !!