24.7 C
ಪುತ್ತೂರು, ಬೆಳ್ತಂಗಡಿ
May 17, 2025
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪ್ರಸನ್ನ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಉಪನ್ಯಾಸ

ಬೆಳ್ತಂಗಡಿ : ಪ್ರಸನ್ನ ಪದವಿಪೂರ್ವ (ಎಎ ಅಕಾಡೆಮಿ) ಕಾಲೇಜಿನಲ್ಲಿ ಮಹಿಳಾಸಬಲೀಕರಣದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜೂ.10ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ ಅನುಸೂಯರವರು ಮಾತನಾಡಿ ಮಹಿಳೆಯರು ಅವಿಭಕ್ತ ಕುಟುಂಬದಿಂದ ಬೇರ್ಪಟ್ಟು ವಿಭಕ್ತ ಕುಟುಂಬವನ್ನು ನಡೆಸುವಲ್ಲಿ ಸಫಲತೆಯನ್ನು ಕಂಡಿದ್ದಾರೆ. ಅದೇ ರೀತಿ ಮಹಿಳೆಯರು ಸಬಲರಾಗಿ ಜೀವನ ಮಾಡಬೇಕಾದರೆ ನಮ್ಮಲ್ಲಿರುವ ನ್ಯೂನ್ಯತೆಗಳನ್ನು ನೋಡದೆ ಸಾಧನೆಯ ಬಗ್ಗೆ ಮಾತ್ರ ಯೋಚನೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಎ.ಎ ಅಕಾಡೆಮಿಯ ಆಡಳಿತ ಅಧಿಕಾರಿ ಶ್ರೀಮತಿ ಕೃಪಾ ಆರ್ ಅವರು ಹೆಣ್ಣು ಸಮಾಜದ ಕಣ್ಣು, ಎಲ್ಲಾ ರೀತಿಯಲ್ಲಿ ಹೆಣ್ಣು ಸಮಾನತೆಯನ್ನು ಪಡೆದು ಸಬಲೀಕರಣದ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾಳೆ ಎಂದು ತಿಳಿಸಿದರು. ವೇದಿಕೆಯಲ್ಲಿ ರಸಾಯನ ಶಾಸ್ತ್ರ ವಿಭಾಗದ ಕಾವ್ಯ ಬಿ. ಆರ್ ಉಪಸ್ಥಿತರಿದ್ದರು. ರಹಿಯಾನ ಧನ್ಯವಾದ ಸಮರ್ಪಿಸಿ, ಆಯಿಷತ್ ಬಹೀಜ ಸ್ವಾಗತಿಸಿ, ಕನ್ನಡ ಉಪನ್ಯಾಸಕರಾದ ಸುಧೀರ್ ಆರ್ ಕಾರ್ಯಕ್ರಮ ನಿರೂಪಿಸಿದರು

Related posts

ಮೌಲ್ಯ ಶಿಕ್ಷಣ” ಪುಸ್ತಕ ರಚನೆ ಸಮಿತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಐ. ಶಶಿಕಾಂತ್ ಜೈನ್ ಆಯ್ಕೆ

Suddi Udaya

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಮಲವಂತಿಗೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!