ಬೆಳ್ತಂಗಡಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕರಾದ ಬಳ್ಳಾರಿಯ ಜನಾರ್ದನ ರೆಡ್ಡಿ ಹಾಗೂ ಕುಟುಂಬ ಜೂ. 13 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು.
ಜನಾರ್ದನ ರೆಡ್ಡಿ ಅವರ ಪತ್ನಿ ಶ್ರೀಮತಿ ಅರುಣಾ ಲಕ್ಷ್ಮೀ, ಮಗಳು ಬ್ರಹ್ಮಣಿ ರೆಡ್ಡಿ, ಆಳಿಯ ರಾಜೀವ್ ಹಾಗೂ ಅವರ ಕುಟುಂಬದವರು ಜೂನ್ ೧೨ ರಾತ್ರಿ ಧರ್ಮಸ್ಥಳ ಸನ್ನಿಧಿಯ ವಸತಿ ಗೃಹಕ್ಕೆ ಆಗಮಿಸಿದ್ದರು. ಜೂ.೧೩ರಂದು ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಸರ್ವ ಸೇವೆ ಪೂಜೆ ಸಲಿಸಿದರು.
ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು ಕಳೆದ 6 ವರ್ಷಗಳಿಂದ ಮಂಜುನಾಥನ ದರ್ಶನ ಮಾಡಲು ಸಾಧ್ಯವಾಗಿಲ್ಲ. ಇಂದು ದರ್ಶನ ಪಡೆದಿದ್ದೇನೆ. ನಿನ್ನೆ ಸಿಬಿಐ ವಿಶೇಷ ಕೋರ್ಟ್ ಪ್ರಕರಣ ಸಂಬಂಧ ಆಸ್ತಿ ಪಾಸ್ತಿ ಮಾರಾಟ ಮಾಡದಂತೆ ಕೋರ್ಟ್ ಆದೇಶ ಮಾಡಿದೆ. ಧರ್ಮಸ್ಥಳ ಮಂಜುನಾಥ ಧರ್ಮ ಮತ್ತು ನ್ಯಾಯವನ್ನು ಕೊಡುತ್ತಾನೆ. ಅವನು ದೇವರಾಗಿರುವ ಕಾರಣ ಅವನಿಂದ ಯಾವತ್ತು ನ್ಯಾಯನೇ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.