30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯ ಭಜನಾ ಮಂಡಳಿಗಳ ಸಭೆ

ಮಡಂತ್ಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯಕ್ಕೆ ಸಂಬಂಧಪಟ್ಟ ಭಜನಾ ಮಂಡಳಿಗಳ ಸಭೆಯನ್ನು ಇತ್ತೀಚೆಗೆ ಮಡಂತ್ಯಾರು ಯೋಜನಾ ಕಚೇರಿಯಲ್ಲಿ ನಡೆಸಲಾಯಿತು. ಸೇವಾಪ್ರತಿನಿಧಿಯಾಗಿರುವ ಶ್ರೀಮತಿ ಹರಿಣಿ ಇವರ ಸ್ವಾಗತದೊಂದಿಗೆ ಸಭೆಯು ನಡೆಯಿತು.

ಯೋಜನಾ ಮೇಲ್ವಿಚಾರಕ ವಸಂತ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಇವರು ಭಜನಾ ಮಂಡಳಿಗಳ ಸರಕಾರದ ನಿಯಮಾನುಸಾರ ನೊಂದಾವಣಿಯ ಬಗ್ಗೆ ಭಜನಾ ಮಂಡಳಿಗಳ ಜಾಗದ ರೆಕಾರ್ಡಿನ ಬಗ್ಗೆ ಹಾಗೂ ಮಂಡಳಿಗಳಿಗೆ ಈಗ ಇರುವ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆ ಮತ್ತು ಅಂತಹ ಸಮಸ್ಯೆಗಳಿಗೆ ಹುಡುಕಿಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು.

ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಅದನ್ನು ಬಲವರ್ಧನೆಗೊಳಿಸಲು ನಮ್ಮ ಭಜಕ ಸಹೋದರರೊಂದಿಗೆ ಸಹೋದರಿಯರು ಮತ್ತು ಮಾತೆಯರು ಕೈಜೋಡಿಸಬೇಕು ಹಾಗೂ ನಮ್ಮ ಮಕ್ಕಳಿಗೆ ಧರ್ಮ ಜಾಗೃತಿಯೊಂದಿಗೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ಮನೆಯಲ್ಲಿ ಹೇಳಿಕೊಡಬೇಕು ಎಂದರು. ನಂತರ ಭಜನಾ ‌ತಂಡಗಳ ಪದಾಧಿಕಾರಿಗಳು ಆಯಾ ತಂಡದ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸೇವಾ ಪ್ರತಿನಿಧಿಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ ಮಡಂತ್ಯಾರು ವಲಯ ಸಂಯೋಜಕರಾದ ಪ್ರವೀಣ್ ಹೆಗ್ಡೆ ಮಡಂತ್ಯಾರು ಹಾಗೂ ಪಣಕಜೆ, ಸೊಣಂದೂರು, ಪಾರೆಂಕಿ, ಪುರಿಯ ಮತ್ತು ಮಂಜಲಪಲ್ಕೆ ಭಜನಾ ತಂಡಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಕಳಿಯ : ಕೊರಂಜ ಶಾಲೆಯ ಬಾವಿ ಹಾಗೂ ಆವರಣ ಗೋಡೆ ಮೇಲೆ ಮರ ಬಿದ್ದು ಹಾನಿ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಎಸ್.ಎಸ್.ಎಲ್.ಸಿ ಉತ್ತಮ ಅಂಕ ಪಡೆದ ಬೆಳ್ತಂಗಡಿ ವಿದ್ಯಾರ್ಥಿ ಸಿಮ್ರಾ ಪರ್ವೀನ್ ಳಿಗೆ ಸನ್ಮಾನ

Suddi Udaya

ಕಕ್ಕಿಂಜೆ : ಕೃಷಿಕ ಗೋಕುಲ್ ದಾಸ್ ಭಟ್ ನಿಧನ

Suddi Udaya

ವೇಣೂರು ತಾಲೂಕು ಕೇಂದ್ರದಿಂದ ವಿವಿಧ ಉಪವಸತಿಗಳಿಗೆ ರಾಮಮಂತ್ರಾಕ್ಷತೆಯ ಕಲಶಗಳ ಹಸ್ತಾಂತರ

Suddi Udaya

ಬಂಟರ ಸಂಘದಿಂದ ವರ್ತಕ ಬಂಧು ಸಹಕಾರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿಯವರಿಗೆ ಸನ್ಮಾನ

Suddi Udaya

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya
error: Content is protected !!