25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಇಲOತಿಲ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ

ಕಣಿಯೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ , ಗುರುವಾಯನಕೆರೆ, ಕಣಿಯೂರು ವಲಯದ ಇಲOತಿಲ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ ವಾಣಿಶ್ರೀ ಭಜನಾ ಮಂದಿರದಲ್ಲಿ ಶ್ರೀಮತಿ ಪಾರ್ವತಿ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ದಾನೇಶ್ವರಿ ದೀಪಾ ಬೆಳಗಿಸಿ ಆರೋಗ್ಯ ರಕ್ಷಣೆಯಲ್ಲಿ ಪರಿಸರ ಸ್ನೇಹಿ ಮೇನ್ ಸುರಲ್ ಕಪ್ ಬಳಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾನಿರ್ದೇಶಕರಾದ ಮಹಾಬಲ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ಮಹಿಳೆಯರಿಗೆ ತಮ್ಮ ನೋವು, ಕಷ್ಟಗಳನ್ನು ಹೇಳಿಕೊಳ್ಳಲು, ವೇದಿಕೆಬೇಕೆಂಬ ದೃಷ್ಟಿಯಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಜ್ಞಾನ ವಿಕಾಸ ಕೇಂದ್ರವನ್ನು ಪ್ರಾರಂಭಿಸಿದರು, ಮೂವತ್ತು ನಲವತ್ತು ವರ್ಷಗಳ ಹಿಂದೆ ಪ್ರತಿ ಮನೆಗಳಲ್ಲಿ ಟಿವಿ, ಮೊಬೈಲ್ ಫೋನ್ ಗಳು ಇರಲಿಲ್ಲ ಪ್ರಪಂಚದ ಹಾದು ಹೋಗುಗಳನ್ನು ತಿಳಿಯಲು ಕೇಂದ್ರವೇ ಮುಖ್ಯವಾಗಿತ್ತು ಇಲ್ಲಿ ಸಿಗುವ ಮಾಹಿತಿಯನ್ನು ಪಡಕೊಂಡು ಬದುಕು ಕಟ್ಟಿಕೊಂಡವರು ಎಷ್ಟೋ ಮಂದಿ ಇದ್ದಾರೆ ಪ್ರಸ್ತುತ ಜ್ಞಾನವಿಕಾಸವು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. ಕ್ಯಾಲಿಪೋರ್ನಿಯ ಬೆಕ್ರೆ ಯೂನಿವರ್ಸಿಟಿಯ ವಿದ್ಯಾರ್ಥಿನಿ ಯಾದ ಕುಮಾರಿ ಸನಾರವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ಶ್ರೀಮತಿ ಸಂಗೀತ ರವರು ಮೆನ್ಸುರಲ್ ಕಪ್ ಖರೀದಿ ,ಬಳಕೆಯ ಹಂತಗಳ ಬಗ್ಗೆ ಮಾಹಿತಿ ನೀಡಿದರು.ಒಕ್ಕೂಟ ಅಧ್ಯಕ್ಷ ರಾದ ಬಾಲಕೃಷ್ಣ ಪೂಜಾರಿ, ಮಾಜಿ ಒಕ್ಕೂಟ ಅಧ್ಯಕ್ಷರಾದ ನಾಣ್ಯಪ್ಪ, ಸೇವಾಪ್ರತಿನಿಧಿ ವಸಂತಿ ಜ್ಞಾನ ವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತವನ್ನು ತಾಲೂಕಿನ ಯೋಜನಾಧಿಕಾರಿ ದಯಾನಂದ ಪೂಜಾರಿ, ನಿರೂಪಣೆಯನ್ನು ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಹರಿಣಿ ನೆರವೇರಿಸಿದರು

Related posts

ಕಳೆಂಜ ಗ್ರಾ.ಪಂ. ಹಾಗೂ ಜನನಿ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ

Suddi Udaya

ಮರಾಠಿ ನಾಯ್ಕ ಸಮುದಾಯದ ಅಶ್ವಥ್ ಎಂಬ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯ: ಸೂಕ್ತ ಕ್ರಮಕೈಗೊಳ್ಳುವಂತೆ ತಾಲೂಕು ಮರಾಠಿ ಸೇವಾ ಸಂಘದ ಉಪಾಧ್ಯಕ್ಷ ವಸಂತ ನಡ ಆಗ್ರಹ

Suddi Udaya

ವಾಣಿ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya

ಲಾಯಿಲ ಕುಂಟಿನಿ ಬೂತ್ ಸಮಿತಿ ವತಿಯಿಂದ ಎಸ್.ಡಿ.ಪಿ.ಐ ಸಂಸ್ಥಾಪನ ದಿನಾಚರಣೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಮತದಾನ ಪ್ರಕ್ರಿಯೆ ಆರಂಭ

Suddi Udaya

ಸಾವ್ಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವಿನ ಅವಶೇಷ ಪತ್ತೆ: ಕೇರಳ ಮೂಲದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು

Suddi Udaya
error: Content is protected !!