ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯ ಭಜನಾ ಮಂಡಳಿಗಳ ಸಭೆ

ಮಡಂತ್ಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯಕ್ಕೆ ಸಂಬಂಧಪಟ್ಟ ಭಜನಾ ಮಂಡಳಿಗಳ ಸಭೆಯನ್ನು ಇತ್ತೀಚೆಗೆ ಮಡಂತ್ಯಾರು ಯೋಜನಾ ಕಚೇರಿಯಲ್ಲಿ ನಡೆಸಲಾಯಿತು. ಸೇವಾಪ್ರತಿನಿಧಿಯಾಗಿರುವ ಶ್ರೀಮತಿ ಹರಿಣಿ ಇವರ ಸ್ವಾಗತದೊಂದಿಗೆ ಸಭೆಯು ನಡೆಯಿತು.

ಯೋಜನಾ ಮೇಲ್ವಿಚಾರಕ ವಸಂತ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಇವರು ಭಜನಾ ಮಂಡಳಿಗಳ ಸರಕಾರದ ನಿಯಮಾನುಸಾರ ನೊಂದಾವಣಿಯ ಬಗ್ಗೆ ಭಜನಾ ಮಂಡಳಿಗಳ ಜಾಗದ ರೆಕಾರ್ಡಿನ ಬಗ್ಗೆ ಹಾಗೂ ಮಂಡಳಿಗಳಿಗೆ ಈಗ ಇರುವ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆ ಮತ್ತು ಅಂತಹ ಸಮಸ್ಯೆಗಳಿಗೆ ಹುಡುಕಿಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು.

ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಅದನ್ನು ಬಲವರ್ಧನೆಗೊಳಿಸಲು ನಮ್ಮ ಭಜಕ ಸಹೋದರರೊಂದಿಗೆ ಸಹೋದರಿಯರು ಮತ್ತು ಮಾತೆಯರು ಕೈಜೋಡಿಸಬೇಕು ಹಾಗೂ ನಮ್ಮ ಮಕ್ಕಳಿಗೆ ಧರ್ಮ ಜಾಗೃತಿಯೊಂದಿಗೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ಮನೆಯಲ್ಲಿ ಹೇಳಿಕೊಡಬೇಕು ಎಂದರು. ನಂತರ ಭಜನಾ ‌ತಂಡಗಳ ಪದಾಧಿಕಾರಿಗಳು ಆಯಾ ತಂಡದ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸೇವಾ ಪ್ರತಿನಿಧಿಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ ಮಡಂತ್ಯಾರು ವಲಯ ಸಂಯೋಜಕರಾದ ಪ್ರವೀಣ್ ಹೆಗ್ಡೆ ಮಡಂತ್ಯಾರು ಹಾಗೂ ಪಣಕಜೆ, ಸೊಣಂದೂರು, ಪಾರೆಂಕಿ, ಪುರಿಯ ಮತ್ತು ಮಂಜಲಪಲ್ಕೆ ಭಜನಾ ತಂಡಗಳ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಪುದುವೆಟ್ಟು ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಲಕ್ಷ್ಮೀ ಯವರಿಂದ ನಾಮಪತ್ರ ಸಲ್ಲಿಕೆ

Suddi Udaya

ಗುರುವಾಯನಕೆರೆ: ಅನುಮಾನಸ್ಪದ ರೀತಿಯಲ್ಲಿ ಯುವಕನೋರ್ವ ಮೃತದೇಹ ಪತ್ತೆ

Suddi Udaya

ಪೆರ್ಲ-ಬೈಪಾಡಿ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎಂ. ಸೇಸಮ್ಮರವರಿಗೆ ಗೌರವಾರ್ಪಣೆ

Suddi Udaya

ಶಿರ್ಲಾಲು: ಅನಾರೋಗ್ಯದಿಂದ ಹೊನ್ನಮ್ಮ ನಿಧನ

Suddi Udaya

ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ

Suddi Udaya

ಪುದುವೆಟ್ಟು ನಿಡ್ವಾಳ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಸಂಪರ್ಕ ರಸ್ತೆಗೆ ಅನುದಾನ ನೀಡಿ ಅಭಿವೃದ್ದಿ ಪಡಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya
error: Content is protected !!