ಗುರುವಾಯನಕೆರೆ: ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ 692 ಅಂಕಗಳೊಂದಿಗೆ ರಾಜ್ಯದಲ್ಲೇ ಅಪೂರ್ವ ಸಾಧಕನಾಗಿ ಗುರುತಿಸಿಕೊಂಡ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆದಿತ್ ಜೈನ್ ಅವರನ್ನು ಕರಾಯದ ಬಳಿಯ ಅವರ ನಿವಾಸ ಬಾವಂತ ಬೆಟ್ಟಿನಲ್ಲಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ವೈದ್ಯಕೀಯ ಶಿಕ್ಷಣಕ್ಕೆ ತೆರಳುವ ಆದಿತ್ ಗೆ ಭಾರತೀಯ ವೈದ್ಯ ಜಗತ್ತಿನ ಅಧಿದೈವ ಧನ್ವಂತರಿ ದೇವರ ಪಂಚ ಲೋಹದ ವಿಗ್ರಹದ ಜೊತೆಗೆ, ಸ್ಟೆತಸ್ಕೋಪ್ , ವೈಟ್ ಕೋಟ್ ಸಹಿತ ಗೌರವಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಕ್ಸೆಲ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಆಡಳಿತಾಧಿಕಾರಿ ಪುರುಷೋತ್ತಮ್, ನೀಟ್ ಸಂಯೋಜಕ ಶ್ರೀನಿಧಿ ಶೆಟ್ಟಿ, ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅಲ್ಲಿಬಾಯ್, ಆದಿತ್ ಅವರ ಅಜ್ಜ ನಿರಂಜನ ಜೈನ್ ಬಾವಂತ ಬೆಟ್ಟು, ತಾಯಿ ಪವಿತ್ರ ಜೈನ್, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.