
ಉಪ್ಪಿನಂಗಡಿ:ಭಾರತೀಯ ರಿಸರ್ವ್ ಬ್ಯಾಂಕ್ ನ ವಿವಿಧ ಪರಿಕ್ರಮಗಳ, ಹಣಕಾಸಿನ ವ್ಯವಹಾರದ ಕುರಿತು ಪ್ರಾಯೋಗಿಕ ಮಾಹಿತಿಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಐಡಿಬಿಐ ಬ್ಯಾಂಕ್ ಚಿಕ್ಕಮಗಳೂರು ಬ್ರಾಂಚ್ ಪ್ರಬಂಧಕಿ ಭವ್ಯ ಜಿ.ಜಿ.ಯವರು ನೀಡಿದರು.
ಅವರು ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬ್ಯಾಂಕಿಂಗ್ ನ ವಿವಿಧ ಸೇವಾ ವಿಚಾರಗಳ ಬಗ್ಗೆ ಹಾಗೂ ಇನ್ಶುರೆನ್ಸ್ ಮತ್ತು ಈಕ್ವಿಟಿ ಮಾರ್ಕೆಟಿಂಗ್ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರೌಢಶಾಲಾ ಅಧ್ಯಾಪಕಿ ಶ್ರೀಮತಿ ವನಲಕ್ಷ್ಮಿ ಎನ್. ಎಚ್ ಅವರು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಅಧ್ಯಾಪಕಿ ಶ್ರೀಮತಿ ಬಿ. ಶೋಭಾ ಸ್ವಾಗತಿಸಿದ್ದು, ಶ್ರೀಮತಿ ದೇವಕಿ ಡಿ. ಅವರು ವಂದಿಸಿದರು. ಶ್ರೀಮತಿ ಸುಮಾ ಆರ್. ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಕಾರ್ಯಕ್ರಮ ಸಂಯೋಜನೆಗೆ ಸಹಕರಿಸಿದರು.