ಸರಕಾರಿ ಪ್ರೌಢ ಶಾಲೆ ಮಚ್ಚಿನ ಇಲ್ಲಿ 2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಅಂಕ ಗಳಿಸಿದ 9 ವಿದ್ಯಾರ್ಥಿಗಳಿಗೆ ಸ್ಥಳೀಯ ಪಾರೆಂಕಿ ಶ್ರೀ ಮಹೀಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ಭಟ್‌ರವರು ಪ್ರತಿ ವಿದ್ಯಾರ್ಥಿಗೂ ತಲಾ ರೂ 5,000ದಂತೆ, ನಗದು ಮೊತ್ತವನ್ನು ನೀಡಿ ಅಭಿನಂದಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ 15 ವಿದ್ಯಾರ್ಥಿಗಳಿಗೆ ರೂಪಾಯಿ 75,000 ರೂ ಕೊಡುಗೆಯಾಗಿ ನೀಡಿ , ಮಕ್ಕಳನ್ನು ಹುರಿದುಂಬಿಸಿದ್ದಾರೆ. ಅಲ್ಲದೆ ಸ್ಥಳೀಯರಾದ ಮಡಂತ್ಯಾರ್‌ನಲ್ಲಿ ವ್ಯಾಪಾರಸ್ಥರಾಗಿರುವ ವಿಠಲ ಶೆಟ್ಟಿ ಮೂಡಯೂರು ಹಾಗೂ ಅವರ ಪುತ್ರರಾದ ಪ್ರಶಾಂತ ಶೆಟ್ಟಿ ಮೂಡಯೂರು ಇವರು ರೂಪಾಯಿ 30,000 ಮೌಲ್ಯದ ಸುಮಾರು 50 ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಸಾಮಾಗ್ರಿಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ರುಕ್ಮಯ ಮೂಲ್ಯ ಬಾಳಿಂಜ, ಎಸ್‌ಡಿಎಂಸಿ ಶಿಕ್ಷಣ ತಜ್ಞರಾದ ಡಾ| ಶ್ರೀ ಮಾಧವ ಶೆಟ್ಟಿ ,ಶಾಲಾ ಮುಖ್ಯ ಶಿಕ್ಷಕರಾದ ಎಸ್. ಪ್ರಕಾಶ್ ನಾಯ್ಕ್, ಸದಸ್ಯರಾದ ಶ್ರೀಮತಿ ಕುಸುಮಾವತಿ, ಶ್ರೀಮತಿ ಲೀಲಾವತಿ ಶ್ರೀಮತಿ ಭವ್ಯ ಹಾಗೂ ಶಿಕ್ಷಕ ವೃಂದ ಪ್ರಸಕ್ತ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ, ಕನ್ನಡ ಶಿಕ್ಷಕ ಅವಿನಾಶ್ ಧನ್ಯವಾದವಿತ್ತರು. ಗಣಿತ ಶಿಕ್ಷಕಿ ಶಿವಾಯಿನಿ ಶೇಟ್ ಕಾರ್ಯಕ್ರಮ ನಿರೂಪಿಸಿದರು.