ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, BC ಟ್ರಸ್ಟ್ ಗುರುವಾಯನಕೆರೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ವೇಣೂರು ಗ್ರಾಮದಲ್ಲಿ ನಡೆಸಲಾಯಿತು.
ಆ. ಪ್ರಯುಕ್ತ2000 ಹಣ್ಣಿನ ಹಾಗೂ ವಿವಿಧ ಜಾತಿಯ ಗಿಡಗಳ ನಾಟಿ ಮಾಡಲಾಯಿತು. ಶೌರ್ಯ ವಿಪತ್ತು ಘಟಕದ ಸದಸ್ಯರು ಗಿಡನಾಟಿ ಕಾರ್ಯದಲ್ಲಿ ಸಹಕಾರ ನೀಡಿದರು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದ ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ ರವರು, ಧರ್ಮಸ್ಥಳ ದ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಸಂಕಲ್ಪಸಿದಂತೆ ಅರಣ್ಯ ಪ್ರದೇಶದ ಪ್ರಾಣಿಗಳು ಬೆಳೆ ಹಾನಿಯನ್ನು ಮಾಡದಂತೆ ನೋಡಿಕೊಳ್ಳುವರೇ ಕಾಡುಪ್ರದೇಶ ದಲ್ಲಿ ಕಾಡು ಪ್ರಾಣಿಗಳಿಗೆ ಬೇಕಾಗುವ ಹಣ್ಣು ಹಂಪಲು ದೊರೆಯುವಂತೆ ಅರಣ್ಯ ಇಲಾಖೆ ಸಹಕಾರ ಪಡೆದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆಯೆಂದರು.
ವೇಣೂರು ವಲಯದ ಉಪ ಅರಣ್ಯ ಅಧಿಕಾರಿ ಸುನಿಲ್ ಕುಮಾರ KS ಮಾತನಾಡಿ, ನಾವು ಈಗ 2000 ಗಿಡ ಕ್ಕೆ ಆಗುವಷ್ಟು ಹೊಂಡ ಹೊಡೆದಿದ್ದು ನಾಟಿ ಮಾಡಲು ಯೋಜನೆಯ ಸಹಕಾರ ನೀಡಿದ್ದು ಬಹಳಷ್ಟು ಅನುಕೂಲ ವಾಗಿದೆ ಎಂದು ನುಡಿದರು. ವಲಯದ ಮೇಲ್ವಿಚಾರಕಿ ಶಾಲಿನಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಅರಣ್ಯ ಗಸ್ತು ಅಧಿಕಾರಿ ಈಶ್ವರ್, ಒಕ್ಕೂಟದ ಅಧ್ಯಕ್ಷ ಜಯಶಂಕರ ಹೆಗ್ಡೆ,ವಿಪತ್ತು ಸಂಯೋಜಕ ಗಣೇಶ್,ಹಾಗೂ ಜಯಂತಿ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ರೋಪಾ, ಸುನೀತಾ ಹಾಗೂ ವಿಪತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.