24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೂ.18: ಆರಂಬೋಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಶಿಬಿರ ಹಾಗೂ ಉಚಿತ ದಂತ ವೈದ್ಯಕೀಯ ಶಿಬಿರ

ಆರಂಬೋಡಿ: ಶ್ರೀಶಾ ಸೌಹಾರ್ದ ಕೋ ಆಪರೇಟವ್ ಸೊಸೈಟಿ ಮಂಗಳೂರು ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಪಲ್ಗುಣಿ, ಸಿದ್ದಕಟ್ಟೆ, ಶಾಲಾ ಅಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ, ಶಿಕ್ಷಕ ವೃಂದ-ಹೊಕ್ಕಾಡಿಗೋಳಿ ಶಾಲೆ, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಹನ್ನೆರಡು ಕವಲು, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಪಾಣಿಮೇರು , ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಕಟ್ಟೆ , ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಬೋಡಿ ಇವರ ಸಹಕಾರದೊಂದಿಗೆ ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ, ಮಂಗಳಾದೇವಿ ಇದರ ಸಹಯೋಗದೊಂದಿಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇವರಿಂದ ಉಚಿತ ದಂತ ವೈದ್ಯಕೀಯ ಶಿಬಿರವು ಜೂ.18 ರಂದು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಆರಂಬೋಡಿ ಗ್ರಾಮ ಪಂಚಾಯತ್ ಬಳಿಯ ಹೊಕ್ಕಾಡಿಗೋಳಿ ಶಾಲೆಯಲ್ಲಿ ನಡೆಯಲಿದೆ.

ಉಚಿತ ಚಿಕಿತ್ಸೆಗಳಾದ ಚರ್ಮ, ಎಲುಬು, ಕಣ್ಣು, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಜನರಲ್ ಚೆಕ್ಆಪ್, ದಂತ ಚಿಕಿತ್ಸೆ ಮತ್ತು ತಪಾಸಣೆ, ಹಾಗೂ ಅಗತ್ಯವುಳ್ಳವರಿಗೆ ಕನ್ನಡಕ ಹಾಗೂ ಕಣ್ಣಿನ ಹೊರೆಯ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು.

Related posts

ಉಜಿರೆ ಶ್ರೀ ಧ. ಮಂ. ಪಾಲಿಟೆಕ್ನಿಕ್ ರಾಷ್ಟೀಯ ಸೇವಾ ಯೋಜನೆ ಘಟಕ , ಯುವ ರೆಡ್ ಕ್ರಾಸ್ ಘಟಕ, ರೋಟರಿ ಕ್ಲಬ್ ಬೆಳ್ತಂಗಡಿ ಸಹ ಭಾಗಿತ್ವದಲ್ಲಿ ಯುವ ಜನತೆ ಮತ್ತು ಆರೋಗ್ಯದ ಉಪನ್ಯಾಸ ಕಾರ್ಯಕ್ರಮ

Suddi Udaya

ಲಾಯಿಲ: ತಾಲೂಕು ಮಟ್ಟದ ಮಂದಿರ ಅಧಿವೇಶನ

Suddi Udaya

ಪ್ರೇಕ್ಷಕರ ಮನಸ್ಸಲ್ಲಿ ಸಹಿ ಹಾಕಲು ರೆಡಿಯಾದ ದಸ್ಕತ್

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಶತ ಚಂಡಿಕಾಯಾಗದ ಪೂರ್ವಭಾವಿ ಸಭೆ

Suddi Udaya

ಮಚ್ಚಿನ: ಆಕಸ್ಮಿಕವಾಗಿ ಮನೆಯ ಹಟ್ಟಿಗೆ ಬೆಂಕಿ : ಅಪಾರ ನಷ್ಟ

Suddi Udaya

ಡಾ. ಯಶೋವರ್ಮರ ಸ್ಮರಣಾರ್ಥ ಪರಿಸರ ನಿರ್ವಹಣಾ ಕಾರ್ಯಾಗಾರ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ