24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಜೂ.21: ಕಳಿಯ ಪ್ರಾ.ಕೃ.ಪ.ಸ. ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ, ರೈತಾಪಿ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣೆ ಹಾಗೂ ಎರಡನೇ ಬಾರಿಗೆ ನೂತನ ಶಾಸಕರಾಗಿ ಆಯ್ಕೆಯಾದ ಹರೀಶ್ ಪೂಂಜ ಮತ್ತು ಮದರ್ ತೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ಪುರಸ್ಕೃತ ಡಾ. ಎಂ.ಎಸ್ ರಾಜೇಂದ್ರ ಕುಮಾರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಕಳಿಯ : ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ, ಸಂಘದ ಕಾರ್ಯವ್ಯಾಪ್ತಿಯ ಎನ್.ಸಿ.ಎಸ್ ನೋಂದಾಯಿಸಿರುವ ರೈತಾಪಿ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣೆ ಹಾಗೂ ಎರಡನೇ ಬಾರಿಗೆ ನೂತನ ಶಾಸಕರಾಗಿ ಆಯ್ಕೆಯಾದ ಹರೀಶ್ ಪೂಂಜ ಮತ್ತು ಮದರ್ ತೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ಪುರಸ್ಕೃತ ಡಾ. ಎಂ.ಎಸ್ ರಾಜೇಂದ್ರ ಕುಮಾರ್ ರವರಿಗೆ ಅಭಿನಂದನಾ ಕಾರ್ಯಕ್ರಮ ಜೂ.21 ರಂದು ಕಳಿಯ ಸರಕಾರಿ ಸಭಾಭವನ ಗೇರುಕಟ್ಟೆಯಲ್ಲಿ ಜರುಗಲಿದೆ.

ಗೋದಾಮು ಕಟ್ಟಡ ಉದ್ಘಾಟನೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ನಿರಂಜನ್ ಬಾವಂತಬೆಟ್ಟು, ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ, ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಆಶಾಲತಾ ಉಪಸ್ಥಿತರಿರುವರು.

Related posts

ಲಾಯಿಲ: ಗುರಿಂಗಾನದಲ್ಲಿ ಅಪಾಯ ಮಟ್ಟದಲ್ಲಿ ನದಿ ನೀರು,: ಸುತ್ತಮುತ್ತಲ ಮನೆಗಳಿಗೆ ತುಂಬಿದ ನೀರು, ಸ್ಥಳಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Suddi Udaya

ಶಿಬಾಜೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆ: ಸೌರಭ ಆರ್ಕೇಡ್ ನಲ್ಲಿ ನೂತನ “ಸೆವೆನ್ತ್ ಹೆವೆನ್ (7th Heaven)” ಕೇಕ್ ಹೌಸ್ ಶುಭಾರಂಭ

Suddi Udaya

ರೈಲಿನ ಬೋಗಿಯಲ್ಲಿ ಅನ್ನಪೂರ್ಣ ರಾನಡೆಯವರ ಕೊಲೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಬಗ್ಗೆ ಆರೋಪ, ಅಪಪ್ರಚಾರ ಮಾಡಿದ ಹಿನ್ನೆಲೆ: ಸುದ್ದಿ ಬಿಡುಗಡೆ ಪತ್ರಿಕೆಯ ಇಬ್ಬರ ಸದಸ್ಯತನ ಅಮಾನತು

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ತೆಕ್ಕಾರುವಿನ ಆಯಿಷಾತುಲ್ ರಫೀಯ ರವರಿಗೆ 568 ಅಂಕ

Suddi Udaya
error: Content is protected !!