26.3 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲಾಯಿಲ ಕಕ್ಕೇನಾದ ಯುವಕ ಭರತ್ ಕುಮಾರ್ ನಾಪತ್ತೆ: ಪೈಂಟಿಂಗ್ ಕೆಲಸ ಮಾಡುತ್ತಿದ್ದ ಯುವಕ : ಪತ್ತೆಗಾಗಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು

ಬೆಳ್ತಂಗಡಿ: ಲಾಯಿಲ ಗ್ರಾಮದ ಕಕ್ಕೇನಾದ ನಿವಾಸಿ ಭರತ್ ಕುಮಾರ್ 33 ವ ವರ್ಷ ಅವರು ಕಾಣೆಯಾಗಿದ್ದು ಪತ್ತೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅವರ ಸಹೋದರ ರವಿ ನಾಯ್ಕ್ ದೂರು ನೀಡಿದ್ದಾರೆ

ಭರತ್ ಕುಮಾರ್ ಪೈಟಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 05.06.2023 ರಂದ ತಾಯಿ ಮತ್ತು ತಮ್ಮ ಇಬ್ಬರೇ ಮನೆಯಲ್ಲಿದ್ದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಮನೆಯಲ್ಲಿ ಯಾರಿಗೂ ತಿಳಿಸದೆ ಭರತ್ ಕುಮಾರನು ಮನೆಯಿಂದ ಹೋಗಿದ್ದು ಈವರೆಗೆ ಆತನು ಮನೆಗೆ ವಾಪಸು ಬಂದಿರುವುದಿಲ್ಲ ಆತನಿಗೆ ದೂರವಾಣಿ ಕರೆ ಮಾಡಿದ್ದು ಆತನ ಮೊಬೈಲ್ ಸ್ವಿಚ್ ಆಪ್ ಆಗಿರುತ್ತದೆ ಈ ಮೊದಲು ಕೆಲಸಕ್ಕೆ ಹೋದವನು 2-3 ವಾರ ಬಿಟ್ಟು ಮನೆಗೆ ವಾಪಸ್ಸು ಬರುತ್ತಿದ್ದು ಹಾಗೆ ಆಗಿರಬಹುದು ಎಂದು ತಿಳಿದು ಪತ್ತೆಗೆ ಪ್ರಯತ್ನಿಸಲಿಲ್ಲ. ಆದರೆ ಇಲ್ಲಿಯವರೆಗೆ ಮನೆಗೆ ವಾಪಸು ಬಾರದೇ ಇರುವುದರಿಂದ ಸಂಬಂಧಿಕರಲ್ಲಿ ವಿಚಾರಿಸಿ ಎಲ್ಲಿಯೂ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದ ಭರತ್ ಕುಮಾರ್ ನನ್ನು ಪತ್ತೆ ಮಾಡಿಕೊಡಬೇಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ದ.ಕ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರಾಗಿ ಕೆ.ಎಮ್ ಅಬ್ದುಲ್‌ ಕರೀಮ್ ಹಾಗೂ ಜಯರಾಮ್ ಅಲಂಗಾರು ಆಯ್ಕೆ

Suddi Udaya

ಚಾರ್‌ಧಾಮ್‌ ಹಾಗೂ ಕೈಲಾಶ ಮಾನಸ ಸರೋವರ ಯಾತ್ರೆಯ ಅರ್ಜಿ ಸಲ್ಲಿಕೆ ಅವಧಿ ಜ. 31 ರ ತನಕ ವಿಸ್ತರಣೆ

Suddi Udaya

ಪಡಂಗಡಿ: ಕಾಂಗ್ರೆಸ್ ಕಾರ್ಯಕರ್ತ ನಝೀರ್ ಬಿಜೆಪಿ ಸೇರ್ಪಡೆ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ರಿಕ್ಷಾ ಚಾಲಕರಿಂದ ಹುಣ್ಸೆಕಟ್ಟೆಯಿಂದ ಸಂತೆಕಟ್ಟೆಯವರೆಗೆ ರಸ್ತೆ ದುರಸ್ತಿ ಕಾರ್ಯ

Suddi Udaya

ಅಳದಂಗಡಿ: ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ನಿಂದ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

Suddi Udaya

ಮಾ.16: ಹೊಕ್ಕಾಡಿಗೋಳಿ ವೀರ – ವಿಕ್ರಮ ಕಂಬಳ: ಕೊಡಂಗೆಯಲ್ಲಿ ಶಾಶ್ವತ ಕರೆಗೆ ಭೂಮಿಪೂಜೆ

Suddi Udaya
error: Content is protected !!