September 6, 2026
ಗ್ರಾಮಾಂತರ ಸುದ್ದಿ

ಉಜಿರೆ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ

ಉಜಿರೆ :ಜ್ಞಾನಶ್ರೀ
ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿಕರಾವಳಿ ಜಾನಪದ ಕಲಾ ತಂಡದಿಂದ
ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರು ರವರು ದೀಪ ಬೆಳಗಿಸಿ ಟಮ್ಕಿ ಬಾರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು . ಕರಾವಳಿ ಜಾನಪದ ಕಲಾ ತಂಡದವರಿಂದ ನೀರು ಮತ್ತು ನೈರ್ಮಲ್ಯದ ಬಗ್ಗೆ .ನೀರು ಅತ್ಯ ಅಮೂಲ್ಯ , ನೀರು ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ ,ಕುಡಿಯುವ ನೀರಿನ ಮಹತ್ವ ಮತ್ತು ಸದ್ಬಳಕೆ ಅಗತ್ಯ, ಪ್ರತಿಯೊಬ್ಬರೂ ನೆಲ -ಜಲ, ಅಂತರ್ಜಲ ಹೆಚ್ಚಳ ಮತ್ತು ಮಳೆನೀರು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಉಳಿಕೆ, ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಭೂಮಿಯಲ್ಲಿ ಅಂತರ್ಜಲ ಕ್ಷೀಣಿಸಿದಂತೆ ದಿನೇ ದಿನೇ ನೀರಿನ ಸಮಸ್ಯೆ ಉಂಟಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ದಿಸೆಯಲ್ಲಿ ನೀರಿನ ಸಮಸ್ಯೆಯನ್ನು ಮನಗಂಡು ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಲು ಜನರಲ್ಲಿ ಪ್ರಜ್ಞೆ ಮೂಡಬೇಕಾಗಿದೆ ಎಂದು ಬೀದಿನಾಟಕ ಪ್ರದರ್ಶನ ಮೂಲಕ ಜನರಿಗೆ ಅರಿವು ಮೂಡಿಸಿದ್ದರು.ಈ ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರು ಶೇಲಾ ವಲಯದ ಮೇಲ್ಪೀಚಾರಕರಾದ ವನಿತಾ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರ ಸೇವಾ ಪ್ರತಿನಿಧಿ ಪ್ರೇಮ ಕಲಾತಂಡದವರು ಹಾಗೂ ಕೇಂದ್ರದ ಎಲ್ಲಾ ಸದಸ್ಯರು.ಊರಿನ ಸದಸ್ಯರು ಪ್ರಗತಿ ಬಂದು ಒಕ್ಕೂಟದ ಸದಸ್ಯರು ಭಾಗವಹಿಸಿದರು.

Related posts

ಶಿಬಾಜೆ ಶ್ರೀ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

Suddi Udaya

ಜ.18: ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು ಸಂಸ್ಕೃತ ಸಂಘದ ಅಧ್ಯಕ್ಷನಾಗಿ ಆದಿತ್ಯ ರಮೇಶ್ ಹೆಗಡೆ ಆಯ್ಕೆ

Suddi Udaya

ಶಿರ್ಲಾಲು ಹಾ.ಉ.ಸ‌.ಸಂಘದ ಸದಸ್ಯ ರಾಧಾಕೃಷ್ಣ ಪಾರೋಟ್ಟುರವರಿಗೆ ಸಹಕಾರಿ ಸಪ್ತಾಹದಲ್ಲಿ ಕ್ಷೀರ ರತ್ನ ಪ್ರಶಸ್ತಿ

Suddi Udaya

ಉಜಿರೆ: ಶ್ರೀ ಧ.ಮಂ. ಸ್ನಾತ್ತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ “ಫ್ಯೂಚರ್ ಹೆಚ್ ಆರ್ ಲೀಡರ್ಸ್” ವಿಶೇಷ ಕಾರ್ಯಾಗಾರ

Suddi Udaya
error: Content is protected !!