ಆರಂಬೋಡಿ: ಶ್ರೀಶ ಸೌಹಾರ್ಧ ಸಹಕಾರಿ ಸಂಘ ಮಂಗಳೂರು, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ಶ್ರೀ ಸಾಯಿ ಬಾಲವಿಕಾಸ ಸಮಿತಿ ಮಂಗಳೂರು, ಹಾಲು ಉತ್ಪಾದಕರ ಸಹಕಾರಿ ಸಂಘ ಆರಂಬೋಡಿ, ಮಂಜುನಾಥೇಶ್ವರ ಭಜನಾ ಮಂಡಳಿ ಪಾನಿಮೇರು,ಶ್ರೀ ಗಣೇಶೋತ್ಸವ ಸಮಿತಿ ಹನ್ನೆರಡು ಕವಲು, ರಿಕ್ಷಾ ಚಾಲಕ ಮಾಲಕರ ಸಂಘ ಸಿದ್ಧಕಟ್ಟೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹೊಕ್ಕಾಡಿಗೊಳಿ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೊಳಿ ಇವರ ಸಂಯುಕ್ತ ಆಶ್ರಯದಲ್ಲಿ ಕೆ ಎಂ, ಸಿ ಆಸ್ಪತ್ರೆ ಮಂಗಳೂರು ಮತ್ತು ಯೇನಪೋಯ ದಂತ ವೈದ್ಯಕೀಯ ಆಸ್ಪತ್ರೆ ದೇರಳಕಟ್ಟೆ ಇವರ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಮತ್ತು ದಂತ ವೈದ್ಯಕೀಯ ಶಿಬಿರ ವು ಜೂನ್ 18 ರಂದು ಹೊಕ್ಕಾಡಿಗೊಳಿ ಶಾಲೆಯಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಶ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಗುರುನಾಥ್, ರೋಟರಿ ಅಧ್ಯಕ್ಷ ರಾದ ಗಣೇಶ್ ಶೆಟ್ಟಿ, ವಲಯ ಸೇನಾನಿ ರಾಘವೇಂದ್ರ ಭಟ್, ನಿಯೋಜಿತ ವಲಯ ಸೇನಾನಿ ಮೈಕಲ್ ಡಿ ಕೋಸ್ಟಾ,ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಚ್, ಶ್ರೀ ಸಾಯಿ ಬಾಲ ವಿಕಾಸ ಟ್ರಸ್ಟ್ ನ ನಿರ್ದೇಶಕರು ಸುರೇಶ್ ಬೈಂದೂರ್ ,ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಶಶಿಧರ ಶೆಟ್ಟಿ,ಕೆ ಎಂ ಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಿಖಿತ, ಯೇನಪೋಯ ದಂತ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಅತೀಫ, ಸಾರ್ವಜನಿಕ ಸಂಪರ್ಕ ಅಧಿಕಾರಿ ಭರತ್,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸದಾಶಿವ ಹುಲಿಮೇರು,ರೋಟರಿ ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ, ಸಚಿದಾನಂದ ಭಟ್, ಪದ್ಮನಾಭ, ಶಿವರಾಜ್ ಶೆಟ್ಟಿ, ರತ್ನಾಕರ ಶೆಟ್ಟಿ, ವಲೇರಿಯನ್ ಲೋಬೋ ಉಪಸ್ಥಿತರಿದ್ದರು.
ಶಿಬಿರ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಶಿಬಿರದಲ್ಲಿ ಮೆಡಿಕಲ್ ವಿಭಾಗದಲ್ಲಿ 317 ಮತ್ತು ದಂತ ವೈದ್ಯಕೀಯ ವಿಭಾಗದಲ್ಲಿ 127 ಫಲಾನುಭವಿಗಳು ಪರೀಕ್ಷೆ ಮಾಡಿಸಿಕೊಂಡಿದ್ದು, 144 ಫಲಾನುಭವಿಗಳು ಕಣ್ಣಿನ ಪರೀಕ್ಷೆ ಮಾಡಿಕೊಂಡಿದ್ದು 90 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.ಮೆಡಿಕಲ್ ವಿಭಾಗದ 36 ಮತ್ತು ದಂತ ವೈದ್ಯಕೀಯ ವಿಭಾಗದ 46 ಫಲಾನುಭವಿಗಳಿಗೆ ಹೆಚ್ಚುವರಿ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ.
ಹೆಚ್ಚುವರಿ ಚಿಕಿತ್ಸೆಯನ್ನು ಕೆ ಎಂ ಸಿ ಮತ್ತು ಯೇನಪೋಯ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದರು.