ಸಿಯೋನ್ ಆಶ್ರಮದಿಂದ ಪುಸ್ತಕ ಮತ್ತು ಬ್ಯಾಗ್ ವಿತರಣೆ

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇಲ್ಲಿ ನೆರಿಯ ಗ್ರಾಮದ ಎಲ್ಲಾ ಶಾಲೆಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ಪುಸ್ತಕ ವಿತರಣೆಯನ್ನು ಜೂ.18 ರಂದು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ತೋಮಸರ ದೇವಾಲಯ, ಗಂಡಿಬಾಗಿಲು ಇಲ್ಲಿಯ ಧರ್ಮ ಗುರುಗಳಾದ ರೇ.ಫಾ. ಜೋಸೆಫ್ ಅಯಂಕುಡಿರವರು ವಹಿಸಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಆಶೀರ್ವದಿಸಿದರು.

ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟೀಯವರಾರದ ಯು.ಸಿ.ಪೌಲೋಸ್ ರವರು ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕೆಂದು ತಿಳಿಸಿದರು.

ನೆರಿಯ ಗ್ರಾಮದ ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಜೋಸೆಫ್ ಪರೋವಕಾರಾನ್, ಸಿಯೋನ್ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ ಹಾಗೂ ಆಶ್ರಮ ನಿವಾಸಿಯಾದ ಪರ್ಲ್ ಮಾರಿಯಾ ಅಪ್ಪೋಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೆರಿಯ ಗ್ರಾಮದ ಶಾಲೆಗಳಾದ ದ.ಕ.ಹಿ.ಪ್ರಾ.ಶಾಲೆ ನೆರಿಯ,ದ.ಕ.ಹಿ.ಪ್ರಾ ಉನ್ನತಿಕರಿಸಿದ ಶಾಲೆ ಬಯಲು, ದ.ಕ.ಹಿ.ಪ್ರಾ. ಶಾಲೆ ಗಂಡಿಬಾಗಿಲು ಮತ್ತು ಸಂತ ತೋಮಸರ ಪ್ರೌಢ ಶಾಲೆ ಗಂಡಿಬಾಗಿಲು ಇಲ್ಲಿನ ನಾಲ್ಕು ಶಾಲಾ ಮಕ್ಕಳಿಗೆ 2023 -24ನೇ ಸಾಲಿನ ವಿಧ್ಯಾಭ್ಯಾಸಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಲಾಯಿತು.

480 ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆದುಕೊಂಡರು. ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯರುಗಳು,ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಎಲ್ಲಾ ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

ತದನಂತರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಯೋನ್ ಆಶ್ರಮದ ವತಿಯಿಂದ ನೀಡಲಾಯಿತು.

Leave a Comment

error: Content is protected !!