ಉರುವಾಲುಪದವು : ಶ್ರೀ ಮಹಮ್ಮಾಯಿ ಕ್ಷೇತ್ರ ಸೇವಾ ಟ್ರಸ್ಟ್ ಶಿವಾಜಿ ನಗರ ಉರುವಾಲುಪದವು ಇದರ ಟ್ರಸ್ಟ್‌ನ ಪದಾಧಿಕಾರಿಗಳ ಮತ್ತು ಕ್ಷೇತ್ರಕ್ಕೆ ಸಹಕರಿಸುವ ಸಂಘ-ಸಂಸ್ಥೆಗಳ ಜಂಟಿ ಸಭೆಯು ಜೂ.18 ರಂದು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಲಿಂಗಪ್ಪ ನಾಯ್ಕ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉರುವಾಲು ವಿಭಾಗದ ಮೇಲ್ವಿಚಾರಕರಾದ ಶಿವಾನಂದ ಇವರು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ಟ್ರಸ್ಟಿನ ಸಭೆಗೆ ಸಹಕರಿಸುವ ಸಂಘ- ಸಂಸ್ಥೆಗಳ ಅಧ್ಯಕ್ಷ, ಕಾರ್ಯದರ್ಶಿಗಳ ಜಂಟಿ ಸಭೆಯನ್ನು ನಡೆಸಿದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಜೂ.30 ಶುಕ್ರವಾರ ಮಹಮ್ಮಾಯಿ ದೇವಾಸ್ಥಾನದ ವಠಾರದಲ್ಲಿ ನಡೆಯುವ ವನಮಹೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಪ್ಪೆಟಿ ಒಕ್ಕೂಟದ ಅಧ್ಯಕ್ಷರಾದ ರಾಮಣ್ಣ ಗೌಡ, ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸಹ ಮೊಕ್ತೇಸರರಾದ ಜನಾರ್ಧನ ಗೌಡ ನಾಕಾಲು ಮತ್ತು ಸೇಸಪ್ಪ ರೈ ಕೊರಿಂಜ, ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ಕಾರಿಂಜ ಇದರ ವತಿಯಿಂದ ಪ್ರದೀಪ್ ನಾಯ್ಕ, ಶ್ರೀ ಸತ್ಯನಾರಾಯಣ ಭಜನಾ ಮಂದಿರ ಉರುವಾಲು ಇದರ ಅಧ್ಯಕ್ಷರಾದ ಯೋಗೀಶ್ ಗೌಡ ಕಜೆ, ಕಾರ್ಯದರ್ಶಿ ರ೦ಜಿತ್ ಧರ್ಮಾಡಿ, ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ ಉರುವಾಲು ಇದರ ಅಧ್ಯಕ್ಷರಾದ ಸೀತಾರಾಮ ನಾಯ್ಕ ಅರ್ಬಿ, ಕಾರ್ಯದರ್ಶಿಯಾದ ಉಮೇಶ ನಾಯ್ಕ ಎಂಜಿರಪಳಿಕೆ ಹಾಗೂ ಸೀತಾರಾಮ ಬಿ.ಎಸ್ ಬೆಳಾಲು, ಜಯರಾಮ ನಾಯ್ಕ ಹಲೇಜಿ, ಕಾಂತಪ್ಪ ನಾಯ್ಕ ತಾಳಿಂಜ ಉಪಸ್ಥಿತರಿದ್ದು ಕ್ಷೇತ್ರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸಹಕರಿಸುವ ಸಂಘ-ಸಂಸ್ಥೆಗಳ ಜಂಟಿ ಸಭೆಯನ್ನು ನಡೆಸಿದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೂ ಕ್ಷೇತ್ರದಲ್ಲಿ ನಡೆಯುವ ವನಮಹೋತ್ಸವ ಕಾರ್ಯಕ್ರಮ ಹಾಗೂ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ನಾಯ್ಕ ಇವರು ಧನ್ಯವಾದವಿತ್ತರು.