25.5 C
ಪುತ್ತೂರು, ಬೆಳ್ತಂಗಡಿ
June 8, 2026
ತಾಲೂಕು ಸುದ್ದಿವರದಿ

ಉರುವಾಲುಪದವು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸಂಘ-ಸಂಸ್ಥೆಗಳ ಜಂಟಿ ಸಭೆ

ಉರುವಾಲುಪದವು : ಶ್ರೀ ಮಹಮ್ಮಾಯಿ ಕ್ಷೇತ್ರ ಸೇವಾ ಟ್ರಸ್ಟ್ ಶಿವಾಜಿ ನಗರ ಉರುವಾಲುಪದವು ಇದರ ಟ್ರಸ್ಟ್‌ನ ಪದಾಧಿಕಾರಿಗಳ ಮತ್ತು ಕ್ಷೇತ್ರಕ್ಕೆ ಸಹಕರಿಸುವ ಸಂಘ-ಸಂಸ್ಥೆಗಳ ಜಂಟಿ ಸಭೆಯು ಜೂ.18 ರಂದು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಲಿಂಗಪ್ಪ ನಾಯ್ಕ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉರುವಾಲು ವಿಭಾಗದ ಮೇಲ್ವಿಚಾರಕರಾದ ಶಿವಾನಂದ ಇವರು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ಟ್ರಸ್ಟಿನ ಸಭೆಗೆ ಸಹಕರಿಸುವ ಸಂಘ- ಸಂಸ್ಥೆಗಳ ಅಧ್ಯಕ್ಷ, ಕಾರ್ಯದರ್ಶಿಗಳ ಜಂಟಿ ಸಭೆಯನ್ನು ನಡೆಸಿದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಜೂ.30 ಶುಕ್ರವಾರ ಮಹಮ್ಮಾಯಿ ದೇವಾಸ್ಥಾನದ ವಠಾರದಲ್ಲಿ ನಡೆಯುವ ವನಮಹೋತ್ಸವ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಪ್ಪೆಟಿ ಒಕ್ಕೂಟದ ಅಧ್ಯಕ್ಷರಾದ ರಾಮಣ್ಣ ಗೌಡ, ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸಹ ಮೊಕ್ತೇಸರರಾದ ಜನಾರ್ಧನ ಗೌಡ ನಾಕಾಲು ಮತ್ತು ಸೇಸಪ್ಪ ರೈ ಕೊರಿಂಜ, ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ಕಾರಿಂಜ ಇದರ ವತಿಯಿಂದ ಪ್ರದೀಪ್‌ ನಾಯ್ಕ, ಶ್ರೀ ಸತ್ಯನಾರಾಯಣ ಭಜನಾ ಮಂದಿರ ಉರುವಾಲು ಇದರ ಅಧ್ಯಕ್ಷರಾದ ಯೋಗೀಶ್‌ ಗೌಡ ಕಜೆ, ಕಾರ್ಯದರ್ಶಿ ರ೦ಜಿತ್ ಧರ್ಮಾಡಿ, ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ ಉರುವಾಲು ಇದರ ಅಧ್ಯಕ್ಷರಾದ ಸೀತಾರಾಮ ನಾಯ್ಕ ಅರ್ಬಿ, ಕಾರ್ಯದರ್ಶಿಯಾದ ಉಮೇಶ ನಾಯ್ಕ ಎಂಜಿರಪಳಿಕೆ ಹಾಗೂ ಸೀತಾರಾಮ ಬಿ.ಎಸ್ ಬೆಳಾಲು, ಜಯರಾಮ ನಾಯ್ಕ ಹಲೇಜಿ, ಕಾಂತಪ್ಪ ನಾಯ್ಕ ತಾಳಿಂಜ ಉಪಸ್ಥಿತರಿದ್ದು ಕ್ಷೇತ್ರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಸಹಕರಿಸುವ ಸಂಘ-ಸಂಸ್ಥೆಗಳ ಜಂಟಿ ಸಭೆಯನ್ನು ನಡೆಸಿದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೂ ಕ್ಷೇತ್ರದಲ್ಲಿ ನಡೆಯುವ ವನಮಹೋತ್ಸವ ಕಾರ್ಯಕ್ರಮ ಹಾಗೂ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ನಾಯ್ಕ ಇವರು ಧನ್ಯವಾದವಿತ್ತರು.

Related posts

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

Suddi Udaya

ಬೆಳ್ತಂಗಡಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾಗಿ ಸುಮಾ ಉಜಿರೆ ಆಯ್ಕೆ

Suddi Udaya

ಪರಸ್ಪರ ಯುವಕ ಮಂಡಲ ಈದು-ನಾರಾವಿ ಇದರ ನೇತೃತ್ವದಲ್ಲಿ “ಮಹಾ ಚಂಡಿಕಾಯಾಗ”ದ ವೈಭವದ ಹಸಿರುವಾಣಿ ಹೊರೆಕಾಣಿಕೆ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭ

Suddi Udaya
error: Content is protected !!