ಮುಂಡಾಜೆ : ವಿವೇಕಾನಂದ ಮುಂಡಾಜೆ ಶಿಕ್ಷಣ ಸಂಸ್ಥೆಯ ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಜೂ.೨೦ ರಂದು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಇದರ ಆಪ್ತ ಸಮಾಲೋಚಕರು ಆಗಿರುವ ರಮ್ಯ ಇವರು ಜಾಗೃತಿ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ರೂಪಲತಾ ಸಹಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜಾಲಿ ಡಿಸೋಜಾ ವಹಿಸಿಕೊಂಡರು. ಕಾಲೇಜಿನ ಜೂನಿಯರ್ ರೆಡ್‌ಕ್ರಾಸ್ ವಿಭಾಗದ ಸಂಯೋಜಕರಾಗಿರುವ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮವನ್ನು ಸಂಘಟಿಸಿದರು. ಉಪನ್ಯಾಸಕಿ ನಮಿತಾ ವಂದಿಸಿದರು.
